JANANUDI.COM NETWORK

ಕುಂದಾಪುರ, ಜ.8: ಉಡುಪಿ ಧರ್ಮಪ್ರಾಂತ್ಯದ 20 ಆಯೋಗಗಳ ಮುಖ್ಯ ನಿರ್ದೆಶಕ ಹಾಗೂ ದಿವ್ಯ ಜ್ಯೋತಿ ಕೇಂದ್ರದ ನಿರ್ದೇಶಕರಾದ ವಂ|ಧರ್ಮಗುರು ಸ್ಟೀಫನ್ ಡಿಸೋಜಾ ಇವರು ಕುಂದಾಪುರ ಮತ್ತು ಪಿಯುಸ್ ನಗರ ಚರ್ಚಿನ, ಉಡುಪಿ ಧರ್ಮಪ್ರಾಂತ್ಯದ ಸರ್ವಾಂಗೀಣ ಅಭಿವ್ರದ್ದಿಗಾಗಿ ಇರುವ 20 ಆಯೋಗಳ ಸಂಚಾಲಕರಿಗೆ, ಚರ್ಚ್ ಉಪಾಧ್ಯಕ್ಷರಿಗೆ, ಕಾರ್ಯದರ್ಶಿಗಳಿಗೆ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ಎಲ್ಲಾ ಆಯೋಗಗಳ ಸಂಚಾಲಕರ ಉದ್ದೇಶ ಮತ್ತು ಜವಾವ್ದಾರಿಯನ್ನು ವಿವರಿಸಿ ತಮ್ಮ ಕರ್ತವ್ಯವನ್ನು ತಮ್ಮ ಸ್ವಂತಕ್ಕೆ ಯಾವುದೇ ಫಲಾಪೇಕ್ಷತೆ ಅಪೇಕ್ಷಿಸದೆ, ಧರ್ಮಸಭೆಯ ಉದ್ದಾರಕ್ಕಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕೆಂದು ತಿಳಿಸಿದರು.
ಕುಂದಾಪುರ ವಲಯ ಪ್ರಧಾನ, ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪ್ರಸ್ತಾವಿಕ ನುಡಿಗಳನ್ನಾಡಿದರು, ಪಿಯುಸ್ ನಗರ ಚರ್ಚಿನ ಧರ್ಮಗುರು ವಂ|ಜೋನ್ ಆಲ್ಫ್ರೆಡ್ ಬಾರ್ಬೊಜಾ, ಉಪಾಧ್ಯಕ್ಷ ವಾಲ್ಟರ್ ಫೆರ್ನಾಂಡಿಸ್, ಕಾರ್ಯದರ್ಶಿ ಜೆನ್ನಿ ಡೆಸಾ, ಕುಂದಾಪುರ ಚರ್ಚಿನ 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಕುಂದಾಪುರ- ಪಿಯುಸ್ ನಗರ 20 ಆಯೋಗಗಳ ಹೆಚ್ಚಿನ ಸಂಚಾಲಕರು ಉಪಸ್ಥಿತರಿದ್ದರು ಕುಂದಾಪುರ ಚರ್ಚಿನ ಉಪಾಧ್ಯಕ್ಷರಾದ ಲುವಿಸ್ ಜೆ.ಫೆರ್ನಾಂಡಿಸ್ ಸ್ವಾಗತಿಸಿದರು. ಪಿಯುಸ್ ನಗರ ಚರ್ಚಿನ 20 ಆಯೋಗಗಳ ಸಂಯೋಜಕಿ ಲೀನಾ ತಾವ್ರೊ ವಂದಿಸಿದರು.