

ಕುಂದಾಪುರ: ನೀಟ್ ಅಕ್ರಮ ಮೋದಿ ಸರ್ಕಾರದ ಬಹುದೊಡ್ಡ ಹಗರಣ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಕೇಂದ್ರ ಸರಕಾರದ ಪ್ರಾಯೋಜಿತ ಭ್ರಷ್ಟಾಚಾರ. ಈ ಅಕ್ರಮಗಳ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಮತ್ತು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸೌರವ ಬಲ್ಲಾಳವರು ಆಗ್ರಹಿಸಿದರು.
ಇಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿ ನಡೆದ ಎನ್ ಎಸ್ ಯು ಐ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕರಾವಳಿ ಭಾಗದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೂತನ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಸ್ವಷ್ಟನೆಯನ್ನು ನೀಡಬೇಕು ಎಂದರು .
ಪ್ರತಿಭಟನೆಯ ನೇತೃತ್ವ ವಹಿಸಿದ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ರಾಷ್ಟ್ರಮಟ್ಟದಲ್ಲಿ ನೀಟ್ ಆಕ್ರಮದ ವಿರುದ್ಧ ಹೋರಾಡುವ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಜೊತೆ ದೇಶದ ವಿದ್ಯಾರ್ಥಿಗಳು ಇದ್ದು ಹೋರಾಡುತ್ತಿರುವಾಗ ಕೇಂದ್ರ ಸರಕಾರ ಸಂಸತ್ತಿನಲ್ಲಿ ಅವರ ಧ್ವನಿಯನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷರಾದ ಕಿಶನ್ ಹೆಗ್ಡೆ ಕೋಳ್ಕೆಬೈಲ್ ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳನ್ನು ಮಾಡುತ್ತೇವೆ ಎಂದರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹರಿಪ್ರಸಾದ್ ಶೆಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಂದಾಪುರ, ಅರವಿಂದ ಪೂಜಾರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈಂದೂರು, ಸುಜನ್ ಶೆಟ್ಟಿ NSUI ಅಧ್ಯಕ್ಷ ,ಕುಂದಾಪುರ ಬ್ಲಾಕ್, ದೇವಕಿ ಸಣ್ಣಯ್ಯ ಅಧ್ಯಕ್ಷೆ ಮಹಿಳಾ ಕಾಂಗ್ರೆಸ್, ವಿಕಾಸ್ ಹೆಗ್ಡೆ ಜಿಲ್ಲಾ ವಕ್ತಾರ, ಅಶೋಕ್ ಪೂಜಾರಿ ನಾಯಕರು, ರೋಶನ್ ಶೆಟ್ಟಿ ಅಧ್ಯಕ್ಷ ಜಿಲ್ಲಾ ಸೋಶಿಯಲ್ ಮೀಡಿಯಾ, ಚಂದ್ರಶೇಖರ ಶೆಟ್ಟಿ ರಾಜ್ಯ ಸೋಶಿಯಲ್ ಮೀಡಿಯಾ ಕಾರ್ಯದರ್ಶಿ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಮತ್ತು ಶ್ರೀಧರ ಶೇರಿಗಾರ್. ಆಶಾ ಕರ್ವಾಲ್ಲೊ, ಸೌಮ್ಯ ಮೊಗವೀರ, ಮುನಾಫ್ ಕೋಡಿ, ಚಂದ್ರ ಆಮೀನ್, ನಾರಾಯಣ ಆಚಾರ್, ಕುಮಾರ ಖಾರ್ವಿ, ಅಭಿಜಿತ್ ಪೂಜಾರಿ, ಗಣೇಶ್ ಶೇರಿಗಾರ್, ಶೋಭಾ ಸಚ್ಚಿದಾನಂದ, ಅಶೋಕ್ ಸುವರ್ಣ, ಹಾರೋನ್ ಸಾಹೆಬ್, ಜ್ಯೋತಿ ನಾಯ್ಕ್, ವಿದ್ಯಾದರ ಪೂಜಾರಿ, ಸುನಿಲ್ ಪೂಜಾರಿ, ಕೇಶವ್ ಭಟ್, ಅಬ್ದುಲ್ ಸಾಹೇಬ್, ಸಂತೋಷ ಪೂಜಾರಿ, ದಿನೇಶ್ ಬೆಟ್ಟ, ಲಕ್ಷ್ಮಣ ಬರೆಕಟ್ಟು, ಚಂದ್ರಕಾಂತ ಖಾರ್ವಿ, ರಾಕೇಶ್ ಶೆಟ್ಟಿ, ರಘುರಾಂ ನಾಯ್ಕ್, ವೇಲಾ ಬ್ರಗಾಂಜ, ಮೇಬಲ್ ಡಿಸೋಜ, ಡೊಲ್ಫಿ ಡಿಕೋಸ್ತ, ವೇಣು ಗೋಪಾಲ ಮತ್ತಿತರ ಕಾರ್ಯಕರ್ತರುರು ಭಾಗವಹಿಸಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾರವರು ಪ್ರಸ್ತಾವಿಕ ಮಾತುಗಳನ್ನು ಆಡಿ , ಕಾರ್ಯಕ್ರಮವನ್ನು ನಿರೂಪಿಸಿದರು.







