JANANUDI.COM NETWORK
ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಡಾನ್ ಬಾಸ್ಕೊ ಯುತ್ ಸೆಂಟರಿನ ರೆಕ್ಟರ್ ಆದ ವಂ|ಕಿರಣ್ ನಜ್ರೆತ್ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಹಳೆ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆ ಸಲ್ಲಿಸಿ ಪರಮ ಪ್ರಸಾದರ ಆರಾಧನೆಯನ್ನು ನೇರವೆರಿಸಿದ ನಂತರ ದಿವ್ಯ ಬಲಿದಾನವನ್ನು ಅರ್ಪಿಸಿದರು
‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ ಆಚರರಣೆ ಮತ್ತೊಂದು ಮೇರಿ ಮಾತೆ ದೇವ ಪುತ್ರ ಆತಳ ಗರ್ಭದಿಂದ ಜನಿಸಿದ್ದರಿಂದ ಅವಳು ದೇವ ಮಾತೆಯಾದದು ಸತ್ಯವಾಗಿದೆ. ಅದರಂತೆ ಮೇರಿ ಮಾತೆಗೆ ‘ದೇವರ ತಾಯಿ’ ಎಂದು ಧರ್ಮಸಭೆ ಅಧಿಕ್ರತವಾಗಿ ಸಾರಿದ ಹಬ್ಬ. ಮೇರಿ ಮಾತೆ ದೇವರ ಆಜ್ಞೆಯನ್ನು ಸೇವಕಿಯಂತೆ ನಡೆದುಕೊಂಡವಳು, ಮೇರಿಮಾತೆ ಯೇಸುವಿಗೆ ತನ್ನ ಗರ್ಭದಿಂದ ಹಿಡಿದು ಆತ ಭೂಗರ್ಭದೊಳಗೆ ಮುಟ್ಟುವ ತನಕ ಜೊತೆ ನೀಡಿದಳು, ಯೇಸು ಈ ಪ್ರಥ್ವಿಯಲ್ಲಿ ಜನಿಸಿದ ಗುರಿ ನೇರವೆರಿಸಲು ಮೇರಿಮಾತೆ ಸಂಪೂರ್ಣವಾಗಿ ಸಹಕರಿದಸಿದಾತಳು. ಇವತ್ತು ನಾವು ಮೇರಿಮಾತೆಯ ಆದರ್ಶಗಳ ಮೂಲಕ ಯೇಸುವಿನತ್ತ ಸಾಗಬೇಕು. ಮೇರಿ ಮಾತೆ ಮತ್ತು ಸಂತ ಜೋಸೆಫರದು ಒಂದು ಪವಿತ್ರ ಕುಟುಂಬ, ಅವರು ಯೇಸುವನ್ನು ದೈವಭಕ್ತಿ, ಉತ್ತಮ ಮೌಲ್ಯ ಗುಣಗಳಿಂದ ಪೋಶಿಸಿದವರು , ನಮ್ಮ ಕುಟುಂಬಗಳು ಹೀಗೆ ಪವಿತ್ರ ಕುಟುಂಬಗಳಾಬೇಕು’ ಎಂದು ಅವರು ಸಂದೇಶ ನೀಡಿದರು.
ಪ್ರಧಾನ ಧರ್ಮಗುರು ಅ| ವ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗವಹಿಸಿ ಶುಭಾಶಯಗಳನ್ನು ಹಂಚಿಕೊಂಡರು. ಬಲಿ ಪೂಜೆಯಲ್ಲಿ ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ ಮತ್ತು ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಪಾಲ್ಗೊಂಡರು.