ಕುಂದಾಪುರ, ಜ.13: ಕೇಂದ್ರ ಸರಕಾರ ನಡೆಸಿದ ಸ್ವಚ್ಛ ಸರ್ವೇಕ್ಷಣಾ 2023ರಲ್ಲಿ ಕುಂದಾಪುರ ಪುರಸಭೆ ಕರ್ನಾಟಕದಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ಮಂಗಳೂರು ಮಹಾನಗರ ಪಾಲಿಕೆಯು ರಾಜ್ಯದಲ್ಲಿ ಒಂಬತ್ತನೇ ಮತ್ತು ದೇಶದಲ್ಲಿ 253 ನೇ ಸ್ಥಾನದಲ್ಲಿದ್ದರೆ, ಉಡುಪಿ ಕರ್ನಾಟಕದಲ್ಲಿ ಹತ್ತನೇ ಮತ್ತು ರಾಷ್ಟ್ರೀಯ ಶ್ರೇಯಾಂಕದಲ್ಲಿ 278 ನೇ ಸ್ಥಾನವನ್ನು ಪಡೆದುಕೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಈ ವಾರ್ಷಿಕ ಸಮೀಕ್ಷೆಯು ಒಂದು ಲಕ್ಷದೊಳಗಿನ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಆಧರಿಸಿ ನಗರಗಳನ್ನು ವರ್ಗೀಕರಿಸುತ್ತದೆ. ನಾಲ್ಕು ಹಂತಗಳಲ್ಲಿ ನಡೆಸಲಾದ ಸಮೀಕ್ಷೆಯು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ.