

ಕುಂದಾಪುರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯಿಂದ ಜನ ಔಷಧಿ ದಿವಸದ ಅಂಗವಾಗಿ ಮೂರನೇ ದಿನ ರೆಡ್ ಕ್ರಾಸ್ ಸದಸ್ಯರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಇಂದು ನಾಲ್ಕನೇ ದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಭಿರ ಆಯೋಜಿಸಲಾಯಿತು. ಶಿಭಿರದಲ್ಲಿ ಮಧುಮೇಹ, ರಕ್ತದೊತ್ತಡ ಮತ್ತು ಅಗತ್ಯ ಇರುವವರಿಗೆ ಇ. ಸಿ. ಜಿ. ಮಾಡಲಾಯಿತು. ಆಯ್ದ ನಾಲ್ಕು ಮಂದಿ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಪೆನ್ನನ್ನು ನೀಡಲಾಯಿತು. ಕಾರ್ಯಕ್ರಮ ವನ್ನು ರೆಡ್ ಕ್ರಾಸ್ ಸಭಾಪತಿ ಶ್ರೀ ಜಯಕರ ಶೆಟ್ಟಿ ಉದ್ಘಾಟಿಸಿದರು.
ಕಾರ್ಯಕ್ರಮ ದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಪದಾಧಿಕಾರಿಗಳಾದ ಗಣೇಶ್ ಆಚಾರ್ಯ, ಡಾ. ಸೋನಿ, ಸದಾನಂದ ಶೆಟ್ಟಿ, ಬಿ.ಎಮ್. ಚಂದ್ರಶೇಖರ, ವೀರೇಂದ್ರ ಕುಮಾರ್, ಸ್ಮಿತಾ ಮತ್ತು ಸಿಭಂದಿಗಳು ಉಪಸ್ಥಿತರಿದ್ದರು. 203 ಜನರ ಆರೋಗ್ಯ ತಪಾಸಣೆ ಮತ್ತು ಐದು ಜನರ ಇ.ಸಿ.ಜಿ ಮಾಡಲಾಯಿತು



