

ಕುಂದಾಪುರ, ಮಾ:30: ಐ.ಎಂ.ಜೆ. ವಿದ್ಯಾ ಸಂಸ್ಥೆಯಲ್ಲಿ ಏಪ್ರಿಲ್ 10 ರಂದು ‘ಸಂಸ್ಥಾಪಕ ದಿನ’ವನ್ನು ಆಚರಿಸಲಾಗುತ್ತದೆ. ಅದರ ಅಂಗವಾಗಿ ಕುಂದಾಪುರ ‘ಮಾನಸ- ಜ್ಯೋತಿ’ ವಿಕಲಚೇತನ ಮಕ್ಕಳಿಗೆ ನಮ್ಮ ಐ. ಎಂ. ಜೆ. ವಿದ್ಯಾ ಸಂಸ್ಥೆ ಬೋಧಕ- ವಿದ್ಯಾರ್ಥಿವೃಂದದವರು ‘ವಿಸ್ಮಯ’ ಕಾರ್ಯಕ್ರಮದಡಿ ವಿವಿಧ ಪ್ರದರ್ಶನದಿಂದ ಮಕ್ಕಳನ್ನು ರಂಜಿಸಿದರು.
ಮಾನಸ ಜ್ಯೋತಿ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ಶೋಭಾ ಮಧ್ಯಸ್ಥ ಅವರು ಈ ಸಂಸ್ಥೆಯನ್ನು ಪ್ರಸ್ತುತ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ 2011 ರಿಂದ ನೆದರ್ಲ್ಯಾಂಡಿನ ಮಾರ್ಟೆ ವಾನ್ ಡೆನ್ ಬ್ಯಾಂಡ್ ನವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಐ.ಎಂ.ಜೆ ವಿದ್ಯಾ ಸಂಸ್ಥೆಯ ಬೋಧಕರಾದ ಶ್ರೀಮತಿ ಅಮೃತಮಾಲ, ಶ್ರೀಮತಿ ಅಕ್ಷತಾ, ಶ್ರೀಮತಿ ಚೈತ್ರ, ಶ್ರೀಮತಿ ಸಬೀನಾ, ಶ್ರೀ ಪ್ರವೀಣ್ ಖಾರ್ವಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


