ಕುಂದಾಪುರ:ಮಾನವ ಬಂಧುತ್ವ ವೇದಿಕೆಯಿಂದ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಣೆ


ಕುಂದಾಪುರ, ಅ. 3:ಮಾನವ ಬಂಧುತ್ವ ವೇದಿಕೆ ಕರ್ನಾಟಕರಾಜ್ಯ, ಕುಂದಾಪುರ ತಾಲೂಕು ಸಮಿತಿಯಿಂದ ಕೋಸ್ತಾ ಸದನ್ ಮಹಡಿ ಸಭಾಂಗಣದಲ್ಲಿ ಮಹಾತ ್ಮಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಜಯಂತಿ ಆಚರಣೆಯನ್ನು ನಡೆಸಲಾಯಿತು.
ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಇವರುಗಳಿಗೆ ನಮನ ಮಾಡಿ ಪುಷ್ಪಾಚರಣೆ ಮಾಡಲಾಯಿತು. ಮಹಾತ್ಮಾ ಗಾಂಧಿಜಿ ಬಗ್ಗೆ ಸಮಾಜ ಸೇವಕ ಸಚಿದಾನಂದ ‘ಗಾಂಧಿಜಿ ನಮ್ಮ ದೇಶದ ಅಂತರಾಷ್ಟ್ರೀಯ ರಾಯಭಾರಿ, ದೇಶ ವಿದೇಶದಲ್ಲಿ ಹೆಚ್ಚಿನ ಗೋಷ್ಠಿಗಳು ಇವರ ಬಗ್ಗೆ ನಡೆಯುತ್ತವೆ, ಶೋಷಿತರು ದಲಿತರ ಮೇಲೆ ಇವರಿಗೆ ಎಲ್ಲಿಲದ ಕಾಳಜಿ ಇದ್ದವರು ಎಲ್ಲಾ ಸಮಾಜದ ಎಲ್ಲಾ ಬಾಂಧವರನ್ನು ಪ್ರೀತಿಸುತಿದ್ದರು’ ಎಂದು ಹೇಳಿದರು. ಲಾಲ್ ಬಹುದ್ದೂರ್ ಬಗ್ಗೆ ಶಿಕ್ಷಕರಾದ ಗಣೇಶ ಹೆಬ್ಬಾರ್ ಮಾತನಾಡಿ ‘ಲಾಲ್ ಬಹುದ್ದೂರ್ ಶಾಸ್ತ್ರಿ ಒಬ್ಬ ಪ್ರಮಾಣಿಕ ಬದ್ದತೆಗೆ ಪ್ರಖ್ಯಾತಿ ಹೊಂದಿದವರು, ದಿಟ್ಟ ನಿರ್ಧಾರ ತೆಗೆದುಕೊಳ್ಳುವರಲ್ಲಿ ಹೆಸರುವಾಸಿ, ಅವರು ಸ್ವಲಕಾಲ ಪ್ರಧಾನಿಯಾಗಿದ್ದರೂ ಜನಪ್ರಿ ಪ್ರಧಾನಿಯಾಗಿದ್ದರು, ಅವರು ಇನ್ನೂ ಹೆಚ್ಚಿನ ಕಾಲ ಬದುಕಿದ್ದರೆ, ಭಾರತದ ಭವಿಶ್ಯವನ್ನೆ ಬದಲಾಯಿಸುತ್ತಿದರು’ ಎಂದು ಹೇಳಿದರು. ವಿನಯಾಡಿಕೋಸ್ತಾ ಭಾಷಣಗಾರರನ್ನು ಪರಿಚಯಿಸಿದರು.


‘ಮಾನವ ಸಂಬಂಧಗಳು ಬೇರೆಯಬೇಕು, ಜಾತಿ ಧರ್ಮ ಮರೆತು ಮಾನವ ಬಂಧುತ್ವ ಬೆಳೆಯಬೇಕು, ಜನರಿಂದ ಮೂಢ ನಂಬಿಕೆ ದೂರವಾಗಬೇಕು ಶೋಷಣೆ ನಿವಾರಿಸಬೇಕು, ವರ್ಣಬೇದ ಸಲ್ಲದು, ಶಿಕ್ಷಣಕ್ಕೆ ಮಹತ್ವ ನೀಡಬೇಕು ಎಂಬುದು ಮಾನವ ಬಂಧುತ್ವ ವೇದಿಕೆಯ ಉದ್ದೇಶಗಳು’ ಎಂದು ಈ ವೇದಿಕೆಯ ಪರಿಕಲ್ಪನೆಯನ್ನು ಸಜ್ಜನ ರಾಜಕಾರಣಿ ಸಾಹುಕಾರ್ ಸತೀಶ್ ಜಾರಕಿ ಹೋಳಿಯವರಿಗೆ ತಿಳಿಸಿದ್ದು ಅವರ ಆಪ್ತರಾದ ರಾಜಕಾರಣಿ ಕಿರಣ್ ಜಿತ್ ರವರು ಅವರ ಧರ್ಮಪತ್ನಿಯಾದ ಜೆಸ್ವಿನಾ ಡಿಕೋಸ್ತಾ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ಉದ್ದೇಶವನ್ನುಸಭಿಕರಿಗೆ ತಿಳಿಯಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷರಾದ ಸಮಾಜ ಸೇವಕ ಯುವ ರಾಜಾಕಾರಣಿ ಮಂಜೀತ್ ನಾಗರಾಜ್ ಮಹಾತ್ಮ ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಇವರ ಬಗ್ಗೆ ಮಾತನಾಡಿ ಇವರಿಬ್ಬರೂ ಭಾರತದ ಮೇರು ನಾಯಕರು, ಇವತ್ತಿನ ದಿನ ಅಂತರಾಷ್ಟ್ರೀಯ ಸ್ಪೀಚ್ ಡೇ ಅನ್ನುತ್ತಾರೆ’ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆ, ಕುಂದಾಪುರ ಸಮಿತಿಯ ಸಂಚಾಲಕ ಪತ್ರಕರ್ತ ಸಾಹಿತಿ ಬರ್ನಾಡ್‍ ಡಿಕೋಸ್ತಾ ಸ್ವಾಗತ ಕೋರಿದರು, ಕಾರ್ಯಕ್ರಮದ ಸಂಚಾಲಕಿ ಶೊಭಾ ಸಚಿದಾನಂದ ವಂದಿಸಿದರು. ಪ್ರಾದ್ಯಪಕ ಎಲ್ಡ್ರಿನ್ ಡಿಸೋಜಾ ನಿರೂಪಿಸಿದರು.