ಕುಂದಾಪುರ ಹೋಲಿ ರೊಜರಿ ಮಾತೆಯ 452 ನೇ ವಾರ್ಷಿಕ ಹಬ್ಬ


ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ,ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್ ಒಕ್ಟೋಬರ್ 7 ರಂದು 452 ನೇ ವಾರ್ಷಿಕ ಹಬ್ಬದ ಸಂಭ್ರಮಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಇಂದು ನಡೆದ ರೊಜರಿ ಅಮ್ಮನವರ ತಾರೀಕಿನ ಹಬ್ಬಕ್ಕೆ ಕಂಡ್ಲುರೂ ಇಗರ್ಜಿಯ ವಂ|ಫಾ| ಧರ್ಮಗುರು ವಂ|ಕೆನ್ಯೂಟ್ ಬರ್ಬೊಜಾ ಪವಿತ್ರ ಬಲಿದಾನವನ್ನು ಅರ್ಪಿಸಿ ‘ನೀವು ಭಾಗ್ಯಶಾಲಿಗಳು, ಯಾಕೆಂದರೆ ನಿಮಗೆ ಪಾಲಕಿಯಾಗಿ ರೋಜರಿ ಮಾತೆ ಸಿಕ್ಕಿದ್ದಾಳೆ, ಇಡೀ ಪ್ರಪಂಚ ರೋಜರಿ ಮಾತೆಯ ಜಪಮಾಲೆಯನ್ನು ಮಾಡುತಿದೆ, ದಿನ ನಿತ್ಯವು ಅವಳನ್ನು ಧ್ಯಾನಿಸುತ್ತಾರೆ, ರೋಜರಿ ಜಪಮಾಲೆಯಲ್ಲಿರುವ ಉದ್ದೇಶಿತ ಉದ್ದೇಶಗಳಿಗಾಗಿ ಜಪಿಸುಸುವುದು ಮಾತ್ರವಲ್ಲ ಅದರಂತೆ ನಾವು ನಡೆಯಬೇಕು, ಪರರರ ಕಷ್ಟಗಳಲ್ಲಿ ನಾವು ನೆರವಾಗಬೇಕು, ಆಗ ರೋಜರಿ ಮಾತೆ ನಮ್ಮ ಜೊತೆಗಿರುತ್ತಾಳೆ, ಯಾರೂ ನಮಗೆ ವಿರೋಧಿ, ವೈರಿಗಳಲ್ಲ, ನಾವು ಪರರಲ್ಲಿ ದೇವರನ್ನು ಕಾಣುವುದಿಲ್ಲ, ಹಾಗಾಗಿ ತನ್ನಿಂದ ತಾನೇ ವೈರಿಗಳಾಗಿ ಪರಿವರ್ತನೆ ಹೊಂದುತ್ತಾರೆ. ರೋಜರಿ ಮಾತೆಯಲ್ಲಿ ಅಸಾಧರಣ ಶಕ್ತಿಯಿದೆ, ರೋಜರಿಯಿಂದ ದೇವರ ಆಶಿರ್ವಾದ, ಕ್ರಪೆ ನಮಗೆ ದೊರಕುವುದು, ರೋಜರಿ ಮಾತೆಯಿಂದ ಆಶಿರ್ವಾದ ಹೊಂದಿದ ನೀವು ಈ ಇಗರ್ಜಿಯ ಜನರು ವೀಶೆಷ ಆಶಿರ್ವಾದಕ್ಕೆ ಪಾತ್ರರಾದವರು, ಅದಕ್ಕಾಗಿ ನೀವು ಸಂತಸ ಪಡಬೇಕು, ಎಂದು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಸ್ವಾಗತಿಸಿ, ಹಬ್ಬದ ಶುಭಾಷಯಗಳನ್ನು ನೀಡಿ, ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿದ್ದಿರಿ, ನಮ್ಮ ಪಾಲಕಿ ರೋಜರಿ ಮಾತೆ ನಮ್ಮನ್ನು 452 ವರ್ಷಗಳಿಂದ ಆಶಿರ್ವದಿಸುತ್ತಲೆ ಬಂದಿದ್ದಾಳೆ, ರೋಜರಿ ಮಾತೆ ಎಲ್ಲರನ್ನು ಹರಸಲಿ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್,ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಇನ್ನಿತರರು ಹಾಜರಿದ್ದರು.