

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಈ ದಿನ ಅಪಘಾತದಲ್ಲಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿರುವ ಗಣೇಶ ನಾವುಡ ಇವರ ಚಿಕಿತ್ಸೆ ಗಾಗಿ ರೂಪಾಯಿ ಹದಿನೈದು ಸಾವಿರ ವನ್ನು ನೀಡಲಾಯಿತು. ಕೇಟರಿಂಗ ಉದ್ಯೋಗದಲ್ಲಿರುವ ಇವರಿಗೆ ಕಾಲೇಜು ವ್ಯಾಸಂಗ ಮಾಡುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಇವರು ರೋಗಿಯ ಪುತ್ರಿಗೆ ಚೆಕ್ ಹಸ್ತಾಂತರಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ ಮತ್ತು ಸತ್ಯನಾರಾಯಣ ಪುರಾಣಿಕ್ ಉಪಸ್ಥಿತರಿದ್ದರು.