ಕುಂದಾಪುರ ಹೋಲಿ ರೊಜರಿ ಹೊಸ ವರ್ಷಾಚರಣೆ – ಮೇರಿ ಮಾತೆಯಂತೆ ಇತರರ ಕಷ್ಟಗಳಿಗೆ ನೆರವಾಗಬೇಕು:ಫಾ|ಅಶ್ವಿನ್


ಕುಂದಾಪುರ, ಜ.1.: ಕುಂದಾಪುರ ರೋಜರಿ ಮಾತೆಯ ಇಗರ್ಜಿಯಲ್ಲಿ 2020 ರ ಹೊಸ ವರ್ಷದ ಪ್ರಯುಕ್ತ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ಪ್ರಧಾನ ಯಾಜಕತ್ವದಲ್ಲಿ ಡಿಸೆಂಬರ್ 31 ರಂದು ಸಂಜೆ ಮಹಾ ಬಲಿದಾನವನ್ನು ಅರ್ಪಿಸಿದರು
‘’ನಾವು ಇವತ್ತು ಎರಡು ಸಂಭ್ರಾಮಚರಣೆಯನ್ನು ಮಾಡುತಿದ್ದೆವೆ. ಒಂದು ಹೊಸ ವರ್ಷದ ಆಚರರಣೆ ಮತ್ತೊಂದು ಮೇರಿ ಮಾತೆ ‘ದೇವರ ತಾಯಿ’ ಎಂಬ ಧರ್ಮಸಭೆ ಅಧಿಕÅತವಾಗಿ ಸಾರಿದ ಹಬ್ಬ. ಮೇರಿ ಮಾತೆಯಂತೆ ಇತರರ ಕಷ್ಟಗಳಿಗೆ ನೆರವಾದರು, ನಾವು ಅವರಂತೆ ಇತರರ ಕಷ್ಟಗಳಿಗೆ ನೆರವಾಗಬೇಕು. ಅವಳೊಬ್ಬಳು ಮಾಹಾ ತಾಯಿ, ನಾವು ತಾಯಿಯನ್ನು ಭಕ್ತಿ ಗೌರವದಿಂದ ಕಾಣುತ್ತೇವೆ, ಕಾರಣ ತಾಯಿ ನಮಗೆ ಮಮತಾಮಯಿ, ತ್ಯಾಗ ಬಲಿದಾನಗಳನ್ನು ಅರ್ಪಿಸುತ್ತಾಳೆ, ನಮ್ಮ ತಾಯಂದಿರು ನಮಗೆ ಇಷ್ಟು ಪ್ರೀತಿಸುತಾರಾದರೆ, ದೇವರ ತಾಯಿಯಾದ ಮೇರಿ ಮಾತೆ ನಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿಯಬೇಕು” ಎಂದು ಬಲಿದಾನದಲ್ಲಿ ಸಹಭಾಗಿಯಾಗಿದ್ದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಸಂದೇಶ ನೀಡಿದರು.
“ಮೇರಿ ಮಾತೆ ಪಟ್ಟ ಕಷ್ಟ, ತ್ಯಾಗ, ಬಲಿದಾನಗಳು ಶ್ರೇಷ್ಟವಾದುವು, ಅವರು ಪವಿತ್ರ ಸಭೆಗೆ ನೀಡಿದ ಪ್ರೇರಣೆ ಅಪಾರ. ಯೇಸುವಿನ ಮರಣದ ನಂತರ ಆತನ ಶಿಷ್ಯರೆಲ್ಲರೂ, ಭಯದಿಂದ, ನಿವಾಸದ ಬಾಗಿಲನ್ನು ಭದ್ರಮಾಡಿಕೊಂಡು ಮುದುರಿ ಕುಳಿತುಕೊಂಡಾಗ ಇದೇ ಮೇರಿ ಮಾತೆ ಶಿಷ್ಯರಿಗೆ ಧೈರ್ಯ ತುಂಬಿ, ಪವಿತ್ರ ಸಭೆಗೆ ಶಕ್ತಿ ನೀಡಿದರು. ಮೇರಿ ಮಾತೆ ದೇವರ ಆಜ್ಞೆಯನ್ನು ಸೇವಕಿಯಂತೆ ನಡೆದುಕೊಂಡು ವಿಶ್ವಾಸದಿಂದ ನಡೆದುಕೊಂಡಳು. ಮೇರಿ ಮಾತೆ ಇತರರ ಪಾಲಿಗೆ ಆಶಿರ್ವಾದಂತೆ ನಡೆದುಕೊಂಡಳು, ನಾವೂ ಕೂಡ ಹೀಗೆಯೆ ಪರೋಪಕಾರಿ, ಆಶಿರ್ವಚನ ನೀಡುವರಾಗಬೆಕು” ಎಂದು ತಿಳಿಸಿದರು.
ಅದಕ್ಕೂ ಮುನ್ನಾ ಘತ ವರ್ಷದಲ್ಲಿ ನಮ್ಮನ್ನು ಕಾಪಾಡಿ ನಮಗೆ ಹಲವು ರೀತಿಗಳಿಂದ ಉಪಕಾರ ಮಾಡಿದಕ್ಕೆ ದೇವರಿಗೆ ಕ್ರತಜ್ಞತೆಗಾಗಿ ಪರಮ ಪ್ರಸಾದರ ಆರಾಧನೆಯನ್ನು ಪ್ರಧಾನ ಧರ್ಮಗುರು ಅ| ವ| ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟು ಹಬ್ಬದ ಶುಭಾಶಯಗಳನ್ನು ಹಂಚಿಕೊಂಡರು.