ಕುಂದಾಪುರ ಹೋಲಿ ರೊಜರಿ ಮಾತೆಯ 453 ನೇ ವಾರ್ಷಿಕ ಹಬ್ಬ “ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಫಾ|ಪಿಯುಸ್


ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 453 ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಿತು.
ತಾರೀಕಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಹೊಸನಗರ ಚರ್ಚಿನ ಧರ್ಮಗುರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವಜನ ನಿರ್ದೇಶಕರಾದ ವಂ|ಪಿಯುಸ್ ಡಿಸೋಜಾ ಅರ್ಪಿಸಿ ”ಅಮ್ಮ ಅಂದರೆ ನಮೆಗೆಲ್ಲರಿಗೂ ಅತ್ಯಂತ ಪ್ರೀತಿಯ ಕಾಳಜಿಯುಳ್ಳವರು, ನೋವಿನಲ್ಲಿ, ದುಖದಲ್ಲಿ, ಸಂತೋಷದಲ್ಲಿಯೂ ನಮಗೆ ಅಮ್ಮ ಬೇಕು, ಅಮ್ಮನ ಬಗ್ಗೆ ಹಲವಾರು ಪುಸ್ತಕಗಳು, ಕವಿತೆಗಳು, ಪದ್ಯಗಳು ಸಾಕಷ್ಟು ಬರೆದಿದ್ದಾರೆ, ಬರೆಯುತ್ತಾ ಇದ್ದಾರೆ, ಇದು ನಮ್ಮ ನಮ್ಮ ಸಂಸಾರಿಕ ಅಮ್ಮ, ಆದರೆ ನಮ್ಗೆಲ್ಲರಿಗೂ ಒರ್ವ ಅಮ್ಮ ಇದ್ದಾರೆ, ಅವರು ಮೇರಿಮಾತೆ, ಆ ಮಾತೆ ನಮಗೆ ಎಲ್ಲಾ ಕಾಲದಲ್ಲಿ ಪ್ರೀತಿ ದಯೆ ತೋರಿಸುತ್ತಾರೆ, ಆ ಅಮ್ಮ ಸದಾಕಾಲ ನಮಗೋಸ್ಕರ ತನ್ನ ಪುತ್ರ ಯೇಸುವಿನಲ್ಲಿ ಬೇಡುತಿರುತ್ತಾಳೆ, ಯೇಸುವನ್ನು ಶಿಲುಭೆಗೇರಿಸಿದ ಮೇಲೆ ಅವರ ಶಿಶ್ಯಂದರಿಗೆ ಧೈರ್ಯ ತುಂಬಿದವಳು ಮೇರಿ ಮಾತೆ, ಅವರ ಮತ್ತೊಂದು ಹೆಸರು ರೋಜರಿ ಮಾತೆ, ಈ ರೋಜರಿ ಮಾತೆಯ ನಮಗೆ ಜಪಮಾಲೆಯ ಮೂಲಕ ಜಪವನ್ನು ಹೇಳಿಕೊಟ್ಟಿದ್ದು, ನಿತ್ಯವೂ ಅವರ ಜಪವನ್ನು ಜಪಿಸಿ, ಮೇರಿ ಮಾತೆ ಇಹಲೋಕದಲ್ಲಿರುವಾಗ ನೆರೆಹೊರೆಯವರ ಸಹಾಯಕ್ಕಾಗಿ, ಯೇಸುವಿನ ಹತ್ತಿರ ಪವಾಡವನ್ನು ಮಾಡಿದ್ದಳು, ಯೇಉ ಮೇರಿಮಾತೆಯ ಯಾವಕೋರಿಕೆಯನ್ನು ನಿರಾಕರಿಸುವುದಿಲ್ಲ, ಅದಕ್ಕಾಗಿ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಅವಳು ಯೇಸುವಿನ ಮೂಲಕ ನಿಮ್ಮ ಪ್ರಾರ್ಥನೆಯನ್ನು ನೇರವೇರಿಸುತ್ತಾಳೆ’ ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಎಂದು ಸಂದೇಶ ನೀಡಿದರು.
ಹಬ್ಬದ ತಯಾರಿಗಾಗಿ ಮೂರು ದಿವಸಗಳ ಧ್ಯಾನಕೂಟವನ್ನು ಎರ್ಪಡಿಸಿದ್ದು, ಆ ದ್ಯಾನಕೂಟವನ್ನು ಫಾ|ಪಿಯುಸ್ ಡಿಸೋಜಾ ಭಕ್ತಿಪೂರ್ವಕ ಅರ್ಥಭರಿತ ದ್ಯಾನಕೂಟವನ್ನು ನಡೆಸಿಕೊಟ್ಟರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಹಬ್ಬದ ಬಲಿದಾನದಲ್ಲಿ ಭಾಗಿಯಾಗಿ ಸ್ವಾಗತಿಸಿ ಹಬ್ಬದ ಶುಭಾಷಯಗಳನ್ನು ನೀಡಿ ‘ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿದ್ದಿರಿ, ನಮ್ಮ ಪಾಲಕಿ ರೋಜರಿ ಮಾತೆ ನಮ್ಮನ್ನು 453 ವರ್ಷಗಳಿಂದ ಆಶಿರ್ವದಿಸುತ್ತಲೆ ಬಂದಿದ್ದಾಳೆ, ರೋಜರಿ ಮಾತೆ ಎಲ್ಲರನ್ನು ಹರಸಲಿ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.