ಕುಂದಾಪುರ :ನ.16 : ಇಲ್ಲಿನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಕ್ರೀಡೋತ್ಸವವು ನವೆಂಬರ್ 16 ರಂದು ಗಾಂಧಿ ಮೈದಾನದಲ್ಲಿ ನಡೆಯಿತು. ನೂತನವಾಗಿ ಆಯ್ಕೆಯಾದ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಧ್ವಜ ವ0ದನೆ ಸ್ವೀಕರಿಸಿದರು. ಪುರಸಭೆಯ ಸದಸ್ಯರಾದ ಪ್ರಭಾಕರ ವಿ. ಕ್ರೀಡಾ ಧ್ವಜವನ್ನು ಆರೋಹಣ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಶಾಲಾ ಮುಖ್ಯೋಪಾಧ್ಯಾಯಿನಿ ವಂ। ಸಿಸ್ಟರ್ ತೆರೇಜ್ ಶಾಂತಿಯವರು ಕ್ರೀಡಾ ಜ್ಯೊತಿಯನ್ನು ಬೆಳಗಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ವಂ।ಸಿಸ್ಟರ್ ಸುಪ್ರಿಯ ಬೆಲೂನುಗಳನ್ನು ಹಾರಿಬಿಟ್ಟರು. ಕುಂದಾಪುರ ಯುವ ಕ್ರೀಡಾ ಸಭಲಿಕರಣದ ಅಧಿಕಾರಿ ಕುಸುಮಾಕರ ಶೆಟ್ಟಿ ಪಾರಿವಾಳಗಳನ್ನು ಹಾರಿಬಿಟ್ಟರು.
ವಿನೋದ್ ಕ್ರಾಸ್ಟೊ ಮಾತನಾಡಿ ‘ನಾವು ದಿನಾಲು ಆಟಗಳನ್ನು ಆಡಬೇಕು, ಆ ರೀತಿ ಆಡಿದರೆ ನಮ್ಮ ಶರೀರ ಅರೋಗ್ಯದಿಂದ ಕೂಡಿರುತ್ತೆ, ನಮ್ಮ ದೇಹವನ್ನು ಸುಧ್ರಡವಾಗಿ ಇಟ್ಟುಕೊಳ್ಳಲು ಕ್ರೀಡೆ ಅಗತ್ಯವಾಗಿರುತ್ತೆ’ ಎಂದು ಹೇಳಿದರು.ಈ ಸಂದರ್ಭದಲ್ಲಿ ಆಯ್ಕೆಯಾದ ನಗರ ಯೋಜನ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ವಿನೋದ್ ಕ್ರಾಸ್ಟೊ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.
ಕುಂದಾಪುರ ಯುವ ಕ್ರೀಡಾ ಸಭಲಿಕರಣದ ಅಧಿಕಾರಿ ಕುಸುಮಾಕರ ಶೆಟ್ಟಿ ಮಾತನಾಡಿ “ನೀವು ಉದ್ಯೋಗಕ್ಕಾಗಿ ಅರಸಿ ಹೋದಾಗ ನಿಮ್ಮ ಫಿಟ್ನೇಸ್ ಕೂಡ ಪ್ರಮುಖ ವಾಗಿರುತ್ತೆ, ನಿಮ್ಮ ದೇಹದ ಫಿಟ್ನೇಸ್ ಇಲ್ಲದೆ ಇದ್ದರೆ ಎನೂ ಪ್ರಯೋಜನವಿಲ್ಲ” ಎಂದು ತಿಳಿಸಿದರು. ವೇದಿಕೆಯಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯರಾದ ಅಸುಂಪ್ತಾ ಲೋಬೊ, ಶಾಂತಿ ಬರೆಟ್ಟೊ, ರೇಶ್ಮಾ ಫೆರ್ನಾಂಡಿಸ್, ಶೈಲಾ ಆಲ್ಮೇಡಾ ಉಪಸ್ಥಿತರಿದ್ದರು.
ಶಾಲ ಸಂಚಾಲಕರಾದ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ।ಪಾವ್ಲ್ ರೇಗೊರವರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಬಹುಮಾನಗಳನ್ನು ವಿತರಿಸಿ ಸಂದೇಶ ನೀಡಿದರು.
ಕ್ರೀಡಾಕೂಟ ಶಾಲೆಯ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಶಿಕ್ಷಕಿ ರಮ್ಯಾ ಸ್ವಾಗತಿಸಿದರು, ಶಿಕ್ಷಕಿ ನೀಖಿತ ಶೆಟ್ಟಿ ನಿರೂಪಿಸಿದರು, ಶಿಕ್ಷಕಿ ವಂ। ಸಿಸ್ಟರ್ ಜೂಲಿಯೆಟ್ ಆರ್ ರೆಬೆಲ್ಲೊ ವಂದಿಸಿದರು.