ಕುಂದಾಪುರ (ಎ.5) : ವಿದ್ಯಾರ್ಥಿಗಳು ಬೇಸಿಗೆ ರಜೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ಒಂದು ವಿಭಿನ್ನ ಕಾರ್ಯಕ್ರಮ. ಮಕ್ಕಳಿಗೆ ಇಂದಿನ ದಿನಗಳಲ್ಲಿ ಮರೆಯಾಗುತ್ತಿರುವ ಹಳ್ಳಿಯ ವಿಚಾರಗಳ ಬಗ್ಗೆ ಇಂತಹ ಶಿಬಿರಗಳ ಮೂಲಕ ತಿಳಿದುಕೊಳ್ಳಲು ಸಾಧ್ಯ ಎಂದು ರಂಗಭೂಮಿ ತರಬೇತುದಾರ, ರಂಗ ನಿರ್ದೇಶಕರಾದ ಶ್ರೀ ವಾಸುದೇವ ಗಂಗೇರರವರು ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್. ಶಾಲೆಯಲ್ಲಿ ಆಯೋಜಿಸಿದ ಬೇಸಿಗೆ ಶಿಬಿರದಲ್ಲಿ ಮೊದಲ ದಿನದ ಮಧ್ಯಾಹ್ನದ ಆವೃತ್ತಿಯಲ್ಲಿ ರಂಗಗೀತೆ ಮತ್ತು ಅಭಿನಯಗಳ ತರಬೇತಿ ನೀಡುತ್ತಾ ಮಾತನಾಡಿದರು. ಕಾರ್ಯಕ್ರಮವನ್ನು ಶಿಕ್ಷಕ ರವಿಚಂದ್ರ ನಿರೂಪಿಸಿ ವಂದಿಸಿದರು. ಪ್ರಾಂಶುಪಾಲೆ ಡಾ. ಚಿಂತನಾ ರಾಜೇಶ್ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.