

ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಮತ್ತು ವಿ. ಕೆ. ಆರ್ ಶಾಲೆಗಳು ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿಟೂರ್ ನ 5ನೇ ದಿನದ ಹೊರಸಂಚಾರದಲ್ಲಿ ಮೊದಲಿಗೆ ಪ್ರಭಾಕರ ಹೆಂಚಿನ ಕಾರ್ಖಾನೆಗೆ ಭೇಟಿ ನೀಡಲಾಯಿತು. ಕಾರ್ಖಾನೆಯ ಮಾಲಿಕರಾದ ಶ್ರೀ ಪ್ರಶಾಂತ್ ತೋಳಾರ್ ಕಾರ್ಖಾನೆಯು ಬೆಳೆದು ಬಂದ ಇತಿಹಾಸವನ್ನು, ಅಲ್ಲಿ ಉತ್ಪಾದನೆಯಾಗುವ ಹೆಂಚುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬಳಿಕ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರೂ, ಸಂಚಾಲಕರೂ ಆದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರ ಹುಟ್ಟೂರಾದ ಮೂಡುಮುಂದದಲ್ಲಿರುವ ಪುರಾತನ ಪ್ರಸಿದ್ಧ ಮನೆ ಭೇಟಿ ಮಾಡಲಾಯಿತು. ಅಲ್ಲಿ ವಿದ್ಯಾರ್ಥಿಗಳು ವಿವಿಧ ಬಗೆಯ ಆಟಗಳನ್ನು ಆಡಿ, ತಮ್ಮ ಪ್ರತಿಭೆ ಪ್ರದರ್ಶಿಸಿದರು. ಶಿಕ್ಷಕರು ಮತ್ತು ಶಿಕ್ಷಕೇತರರು ಉಪಸ್ಥಿತರಿದ್ದರು.

