JANANUDI.COM NETWORK
ಕುಂದಾಪುರ, ಮಾ.1: ಪ್ರೀತಿಸಿ ಮ್ದಾದುವೆಯಾದ ಗಂಡ ತನ್ನ ಗರ್ಭಿಣಿ ಹೆಂಡತಿಗೆ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿತ್ತು, ಗಂಡನ ನಿರಂತರ ಕಿರುಕುಳ ತಾಳಲಾರದೆ ಹೆಂಡತಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು, ಇದೀಗ ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪಾತಕಿ ಪತಿಯನ್ನು ಸಿದ್ದಾಪುರದಲ್ಲಿ ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಮೊದಲು ಗಂಡ ಹೆಂಡತಿಗೆ ಸೀಗರೇಟಿನಿಂದ ಸುಡುತಿದ್ದ ವಿಡೀಯೊವೊಂದು ವೈರಲ್ ಆಗಿತ್ತು. ಅದರಲ್ಲಿನ ಸಂಭಾಷಣೆ ಕುಂದಾಪುರ ಕನ್ನಡದಲ್ಲಿ ಇದ್ದುದರಿಂದ ಈ ಕೇಸ್ ಕುಂದಾಪುರ ಕಎಯದೇ ಎಂದು ಜನ ಆಡಿಕೊಳ್ಳುತಿದ್ದರು.
ಇದೀಗ ಕುಂದಾಪುರದ ಬರೆಕಟ್ಟು ನಿವಾಸಿ ಪ್ರದೀಪ್ ಬಂಧಿತ ಗಂಡ ಆರೋಪಿ, ಪ್ರದೀಪ್ ಹಾಗೂ ಪ್ರಿಯಾಂಕ ಪರಸ್ಪರ ಪ್ರೀತಿಸಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿವಾಹವಾಗಿದ್ದರು. ಮದುವೆಯಾಗಿ ನಾಲ್ಕೈದು ತಿಂಗಳು ಕಳೆಯುತ್ತಿದ್ದಂತೆಯೇ ಪ್ರದೀಪ್ ತನ್ನ ಪತ್ನಿಯಲ್ಲಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದು, ದಿನನಿತ್ಯವೂ ತವರು ಮನೆಯಿಂದ ಚಿನ್ನ ಹಾಗೂ ಹಣವನ್ನು ತರುವಂತೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. ದ್ದೀಗ ಪ್ರದೀಪ್ ಪೊಲೀಸರ ವಷವಾಗಿ ಕಂಬಿ ಎಣಿಸುತ್ತಿದ್ದಾನೆ.