ಕುಂದಾಪುರ; ಇಂದು ನಮ್ಮ ದೇಶ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿಯವರು ಈ ಹಿಂದೆ ತೆಗೆದುಕೊಂಡ ದೂರದೃಷ್ಟಿಯ ದೃಢ ನಿರ್ಧಾರಗಳೇ ಕಾರಣ. ಬ್ಯಾಂಕ್ ರಾಷ್ಟ್ರೀಕರಣ , ಭೂ ಸುಧಾರಣೆ , ಮತ್ತು ಗರೀಬಿ ಹಟಾವೋ ಮೂಲಕ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಯಿತು’ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹೆಳೀದರು. ೧೯-೧೧-೨೪ ರಂದು ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತ ಉಪಹಾರವನ್ನು ಬ್ಲಾಕ್ ಕಾಂಗ್ರೆಸ್ ನಿಂದ ನೀಡಿ ಅವರು ಮಾತನಾಡಿದರು.
ನ್ಯಾಯವಾದಿ ಸಚ್ಚಿದಾನಂದ ಎಂ ಎಲ್ ಅವರು ಮಾತನಾಡಿ ದೇಶದ ಕಟ್ಟಕಡೆಯ ಜನರನ್ನು ಸಮಾನತೆಯ ಮೂಲಕ ಮುಖ್ಯ ವಾಹಿನಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳು ಅದರ ಒಂದು ಮುಂದುವರಿದ ಭಾಗ ಎಂದರು.
ನಾಯಕರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ್ , ಅಬ್ಬು ಮಹಮ್ಮದ್ , ಪಂಚಾಯತ್ ಸದಸ್ಯರಾದ ರೋಷನ್ ಬರೆಟ್ಟೊ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ ,ಯೋಜನಾ ಪ್ರಾಧಿಕಾರದ ಸದಸ್ಯರಾದ ಚಂದ್ರ ಅಮೀನ್ , ಅಲ್ಫಾಜ್ ,ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮುನಾಫ್ ಕೊಡಿ, ಮಾಜಿ ಪುರಸಭಾ ಅಧ್ಯಕ್ಷರಾದ ಹಾರೊನ್ ಸಾಹೇಬ್ ,ಪುರಸಭಾ ನಾಮನಿರ್ದೇಶಿತ ಸದಸ್ಯರಾದ ಅಶೋಕ್ ಸುವರ್ಣ, ಶಶಿ ಪೂಜಾರಿ ಹಾಗೂ ಶಶಿಧರ ನಂದಿ ಬೆಟ್ಟ, ಹಿರಿಯರಾದ ಅಬ್ದುಲ್ಲಾ ಕೊಡಿ , ರೋಹನ್ ಫುಟಾರ್ಡೊ, ಮಾಣಿ ಉದಯಕುಮಾರ್, ಡೆನ್ನಿಸ್ ಕೊತಾ ,ದಿನೇಶಬೆಟ್ಟ ,ಮಾರ್ಕ್ ಫೆರ್ನಾಂಡಿಸ್, ಮಧುಕರ, ದಾಮನ್, ಶೋಭಾ ಸಚ್ಚಿದಾನಂದ, ವೇಲಾ ಬ್ರಗಾಂಜ ,ನಾಗರಾಜ ನಾಯಕ್, ಸವಿತಾ ಸಿಕ್ವೇರಾ, ಚಂದ್ರಕಾಂತ ಖಾರ್ವಿ, ಎಡಾಲ್ಫ್ ಡಿ ಕೊಸ್ಟಾ, ಇರ್ಫಾನ್, ನೋಯೆಲ್ ಸಿಕ್ವೇರಾ ಇನ್ನಿತರರು ಉಪಸ್ಥಿತರಿದ್ದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ ಸ್ವಾಗತಿಸಿ, ನಿರೂಪಿಸಿದರು. ಜಿಲ್ಲಾ ಸೇವಾದಳ ಕಾರ್ಯದರ್ಶಿ ಜ್ಯೋತಿ ನಾಯಕ್ ವಂದಿಸಿದರು.