

ಬ್ಯಾಂಕ್ ರಾಷ್ಟ್ರೀಕರಣ, ಭೂ ಸುಧಾರಣೆ ಮತ್ತು ಗರೀಬಿ ಹಟಾವೋ ಮೂಲಕ ದೇಶವನ್ನು ಅಭಿವೃದ್ಧಿಯತ್ತ ತಂದ ಭಾರತದ ಪ್ರಥಮ ಮಹಿಳಾ ಪ್ರಧಾನಿ ಇಂದಿರಾಗಾಂಧಿ. ಅವರ ದೂರ ದೃಷ್ಟಿಯ ಪ್ರತಿಫಲವಾಗಿ ಇಂದು ಈ ದೇಶ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಹರಿಪ್ರಸಾದ್ ಶೆಟ್ಟಿಯವರು ಹೇಳಿದರು .
ಇಂದು ಬೆಳಿಗ್ಗೆ ಕುಂದಾಪುರದ ಶಾಸ್ತ್ರಿ ಸರ್ಕಲ್ ನಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಉಪಹಾರವನ್ನು ಬ್ಲಾಕ್ ಕಾಂಗ್ರೆಸ್ ವತಿಯಿಂದ ನೀಡಿ ಅವರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ವಿನೋದ್ ಕಾಸ್ಟೋ ಅವರು ಪ್ರಾಸ್ತಾವಿಕವಾಗಿ ಮಾತನಾಡಿ , ದೇಶದ ಕಟ್ಟಕಡೆಯ ಜನರನ್ನು ಸಮಾನತೆಯ ಮೂಲಕ ಮುಖ್ಯ ವಾಹಿನಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ . ಪ್ರಸ್ತುತ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಕಾರ್ಯಕ್ರಮಗಳು ಅದರ ಒಂದು ಮುಂದುವರಿದ ಭಾಗ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಬ್ಲಾಕ್ ಅಧ್ಯಕ್ಷೆ ದೇವಕಿ ಸಣ್ಣಯ್ಯ ,ಪುರಸಭೆ ಸದಸ್ಯರಾದ ಶ್ರೀಧರ್ ಶೇರಿಗಾರ , ಅಬ್ಬು ಮಹಮ್ಮದ್ ,ಪ್ರಭಾವತಿ ಶೆಟ್ಟಿ , ಪಂಚಾಯತ್ ಸದಸ್ಯರಾದ ವಿಜಯಧರ್ ಕೆ ವಿ , ಜಿಲ್ಲಾ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಎನ್ ಎಸ್ ಯು ಐ ಅಧ್ಯಕ್ಷ ಸುಜನ್ ಶೆಟ್ಟಿ ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ ಹಿರಿಯರಾದ ಗಂಗಾಧರ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರಮೀನ್ ಅಶ್ವತ್ ಕುಮಾರ್ , ಮುನಾಫ ಕೋಡಿ ,ಐ ಟಿ ಸೇಲ್ ನ ಚಂದ್ರಶೇಖರ್ ಶೆಟ್ಟಿ ,ನ್ಯಾಯವಾದಿ ಸಚ್ಚಿದಾನಂದ್ ಎಂ ಎಲ್ ,ಆಶಾ ಕರ್ವಾಲ್ಲೊ , ಕುಮಾರ ಖಾರ್ವಿ, ಜ್ಯೋತಿ ನಾಯ್ಕ್ ,ಅಶೋಕ್ ಸುವರ್ಣ, ಶೋಭಾ ಸಚ್ಚಿದಾನಂದ , ಕೇಶವ ಭಟ್ ,ಅಭಿಜಿತ್ ಪೂಜಾರಿ , ವಿಠ್ಠಲ್ ಕಾಂಚನ್ , ಕೆ ಸುರೇಶ್ ,ವಿವೇಕಾನಂದ , ವೇಣುಗೋಪಾಲ್ , ಎಡಾಲ್ಫ್ ಡಿಕೋಸ್ತಾ, ಮಧುಕರ ಬಡೆಕಟ್ಟು ,ಸುನಿಲ್ ಪೂಜಾರಿ , ಆನಂದ ಪೂಜಾರಿ ,ಎಂ ಉದಯಕುಮಾರ್ , ರಮೇಶ , ಸತೀಶ, ಸದಾನಂದ ಖಾರ್ವಿ, ದಿನೇಶ ಬೆಟ್ಟ ಇನ್ನಿತರರು ಉಪಸ್ಥಿತರಿದ್ದರು.




