ಕುಂದಾಪುರ, ಜ.31: ಕುಂದಾಪುರ ರೋಜರಿ ಮಾತಾ ಇಗರ್ಜಿಗೆ ಸಂಬಂಧ ಪಟ್ಟ ಸಂತ ಜುಜೆ ವಾಜ್ ಇವರಿಗೆ ಸಮರ್ಪಿತಗೊಂಡ ಸಂತ ಜುಜೆ ವಾಜ್ ವಾಳೆಯವರು, ತಮ್ಮ ಪಾಲಕರ ಹಬ್ಬವನ್ನು ಭಾನುವಾರ ಜ. 29 ರಂದು ಇಗರ್ಜಿಯಲ್ಲಿ ಬೆಳಿಗ್ಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು. ಪವಿತ್ರ ಬಲಿದಾನವನ್ನು ಮಂಗಳೂರಿನ ಧರ್ಮಗುರು ವಂ|ಐವನ್ ಮಾಡ್ತಾ ಇವರ ನೇತ್ರತ್ವದಲ್ಲಿ ಅರ್ಪಿಸಲಾಯಿತು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಹಬಲಿದಾನವನ್ನು ಅರ್ಪಿಸಿ ಶುಭ ಕೋರಿದರು.
ಸಂಜೆ ಜೇಕಬ್ ಡಿಸೋಜಾ ಇವರ ನಿವಾಸದಲ್ಲಿ ಹಬ್ಬದ ಆಚರಣೆ ನಡೆಯಿತು. ವಾಳೆಯ ಗುರಿಕಾರ ಬರ್ನಾಡ್ ಡಿಕೋಸ್ತಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೋಜರಿ ಮಾತೆಯ ಜಪಮಾಲೆ ಪ್ರಾರ್ಥನೆಯನ್ನು ನೆಡಸಾಲಾಯಿತು, ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಧರ್ಮಗುರು ವಂ|ಸ್ಟ್ಯಾನಿ ತಾವ್ರೊ ಸಂತ ಜೋಸೆಫ್ ವಾಜ್‍ರ ನೊವೆನಾವನ್ನು ನಡೆಸಿಕೊಟ್ಟು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಸಂತ ಜೋಸೆಫ್ ವಾಜರ ಬಗ್ಗೆ ಅವರು ಮಾಡಿದ ಅದ್ಬುತಗಳ ಬಗ್ಗೆ ವಿವರಿಸಿ, ರೋಜರಿ ಚರ್ಚಿನಲ್ಲಿ ಪ್ರಧಾನ ಧರ್ಮಗುರುಗಳು ಆಗುವುದಂದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಯಾಕೆಂದರೆ ಈ ಸ್ಥಾನ ಸಂತ ಜೋಸೆಫ್ ಅಂತಾ ಮಹಾನ್ ಸಂತರದಾಗಿತ್ತು’ ಎನ್ನುತ್ತಾ ನಿಮ್ಮ ವಾಳೆ ಪ್ರತಿಭಾವಂತರಾಗಿದೆ ಎಂದರು.
ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಕಿರು ಸಮುದಾಯದ ಸಂಚಾಲಕಿ ಝಿಟಾ ಕರ್ವಾಲ್ಲೊ ವರದಿಯನ್ನು ವಾಚಿಸಿದರು. ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನ ಮಂಡ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥಿರಿದ್ದರು. ಕಿರು ಸ್ಫರ್ಧೆಗಳನ್ನು ನೆಡಸಲಾಯಿತು, ಚಿಕ್ಕ ಮಕ್ಕಳು ನ್ರತ್ಯ ಪ್ರದರ್ಶಗಳನ್ನು ನೀಡಿದರು. ದೇವ ಸ್ತುತಿಯ ಸಂಚಾಲಕಿ ವಿನಯಾ ಡಿಕೋಸ್ತಾ, ಜಪಮಾಲೆ ಪ್ರಾಥನೆಯನ್ನು ನಡೆಸಿಕೊಟ್ಟರು. ವಾಳೆಯ ಪ್ರತಿನಿಧಿ ಫೆರ್ಮಿನ್ ಡಿಸೋಜಾ ವಂದಿಸಿದರು. ಅಂತೋನಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.