ಕುಂದಾಪುರ ಕೃಷಿಕ, ನಿವೃತ್ತ ಮುಖ್ಯೋಪಾಧ್ಯಾಯರ ಮೇಲೆ ಹಲ್ಲೆ ಆರೋಪ

JANANUDI.COM NETWORK

ಕುಂದಾಪುರ: ನಿವೃತ್ತ ಮುಖ್ಯೋಪಾಧ್ಯಾಯ, ಕೃಷಿಕ ಬೇಳೂರು ಆನಂದ ಶೆಟ್ಟಿಯವರ ಮೇಲೆ ಹಲ್ಲೆ ಮಾಡಿದ ಸಂಬಂಧ ಜೂನ್ 24 ರಂದು ಕೋಟ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿ. ಆನಂದ ಶೆಟ್ಟಿಯವರು ವಾಸ್ತವ್ಯದಲ್ಲಿರುವ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸರ್ವೆ ನಂ. 211/5P3 ಜಾಗಕ್ಕೆ ಜ್ಯೋತಿ ಶೆಡ್ತಿ, ಮಹೇಶ ಶೆಟ್ಟಿ, ರಘುರಾಮ ಶೆಟ್ಟಿ, ವಸಂತ ಶೆಟ್ಟಿ, ವಸಂತಿ ಶೆಡ್ತಿ ಎಂಬವರು ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಫಿರ್ಯಾದುದಾರರಿಗೆ ದೊಣ್ಣೆಯಿಂದ ಹೊಡೆದಿರುತ್ತಾರೆ. ಎಂದು ಕೋಟ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟಿದೆ.
ಈ ಹಿಂದೆ ಕೋಟ ಪೋಲಿಸ್ ಠಾಣೆಗೆ ರಘುರಾಮ ಶೆಟ್ಟಿ, ಮಹೇಶ ಶೆಟ್ಟಿ, ಜ್ಯೋತಿ ಶೆಟ್ಟಿಯವರನ್ನು ಠಾಣೆಗೆ ಕರೆಯಿಸಿ ವಿಚಾರಿಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಪಡೆಯಲಾಗಿತ್ತು.
90ರ ಹರೆಯದ ಆನಂದ ಶೆಟ್ಟಿಯವರು ತನಗೆ ನ್ಯಾಯ ಒದಗಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ನನ್ನ ಸ್ಥಳದಲ್ಲಿ ದೊಣ್ಣೆಯಿಂದ ಹೊಡೆದ ದೃಶ್ಯ ಮೊಬೈಲ್‍ನಲ್ಲಿ ಶೇಖರಿಸಿದ್ದು ಅದನ್ನು ದೂರಿನೊಂದಿಗೆ ಲಗ್ತೀಕರಿಸಿರುತ್ತೇನೆ. ನಾನು ಠಾಣೆಗೆ ಕೊಟ್ಟ ಅರ್ಜಿಯಲ್ಲಿ ಸತ್ಯವಿದ್ದು ಅವರು ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಲೇ ಇದ್ದ ವಿಷಯ ಈ ಹಿಂದೆಯೇ ಠಾಣಾಧಿಕಾರಿಯವರಲ್ಲಿ ಪ್ರಸ್ತಾಪಿಸಿರುತ್ತೇನೆ ಎಂದು ಬಿ. ಆನಂದ ಶೆಟ್ಟಿ ದೂರಿನ ಬಗ್ಗೆ ತಿಳಿಸಿದ್ದಾರೆ.ಕುಂದಾಪುರ
ನಿವೃತ್ತ ಮುಖ್ಯೋಪಾಧ್ಯಾಯ, ಕೃಷಿಕ ಬೇಳೂರು ಆನಂದ ಶೆಟ್ಟಿಯವರ ಮೇಲೆ ಹಲ್ಲೆ ಮಾಡಿದ ಸಂಬಂಧ ಜೂನ್ 24 ರಂದು ಕೋಟ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಬಿ. ಆನಂದ ಶೆಟ್ಟಿಯವರು ವಾಸ್ತವ್ಯದಲ್ಲಿರುವ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸರ್ವೆ ನಂ. 211/5P3 ಜಾಗಕ್ಕೆ ಜ್ಯೋತಿ ಶೆಡ್ತಿ, ಮಹೇಶ ಶೆಟ್ಟಿ, ರಘುರಾಮ ಶೆಟ್ಟಿ, ವಸಂತ ಶೆಟ್ಟಿ, ವಸಂತಿ ಶೆಡ್ತಿ ಎಂಬವರು ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ ಫಿರ್ಯಾದುದಾರರಿಗೆ ದೊಣ್ಣೆಯಿಂದ ಹೊಡೆದಿರುತ್ತಾರೆ. ಎಂದು ಕೋಟ ಠಾಣೆಯಲ್ಲಿ ದೂರು ದಾಖಲಿಸಲ್ಪಟ್ಟಿದೆ.
ಈ ಹಿಂದೆ ಕೋಟ ಪೋಲಿಸ್ ಠಾಣೆಗೆ ರಘುರಾಮ ಶೆಟ್ಟಿ, ಮಹೇಶ ಶೆಟ್ಟಿ, ಜ್ಯೋತಿ ಶೆಟ್ಟಿಯವರನ್ನು ಠಾಣೆಗೆ ಕರೆಯಿಸಿ ವಿಚಾರಿಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಪಡೆಯಲಾಗಿತ್ತು.
90ರ ಹರೆಯದ ಆನಂದ ಶೆಟ್ಟಿಯವರು ತನಗೆ ನ್ಯಾಯ ಒದಗಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ನನ್ನ ಸ್ಥಳದಲ್ಲಿ ದೊಣ್ಣೆಯಿಂದ ಹೊಡೆದ ದೃಶ್ಯ ಮೊಬೈಲ್‍ನಲ್ಲಿ ಶೇಖರಿಸಿದ್ದು ಅದನ್ನು ದೂರಿನೊಂದಿಗೆ ಲಗ್ತೀಕರಿಸಿರುತ್ತೇನೆ. ನಾನು ಠಾಣೆಗೆ ಕೊಟ್ಟ ಅರ್ಜಿಯಲ್ಲಿ ಸತ್ಯವಿದ್ದು ಅವರು ಅತಿಕ್ರಮಣ ಮಾಡಲು ಪ್ರಯತ್ನಿಸುತ್ತಲೇ ಇದ್ದ ವಿಷಯ ಈ ಹಿಂದೆಯೇ ಠಾಣಾಧಿಕಾರಿಯವರಲ್ಲಿ ಪ್ರಸ್ತಾಪಿಸಿರುತ್ತೇನೆ ಎಂದು ಬಿ. ಆನಂದ ಶೆಟ್ಟಿ ದೂರಿನ ಬಗ್ಗೆ ತಿಳಿಸಿದ್ದಾರೆ.