ಕುಂದಾಪುರ ಜೂನ್ 29: ವಯೋ ನಿವೃತ್ತಿ ಗೊಂಡ ಶ್ರೀಮತಿ ಡೋರತಿ ಸುವಾರಿಸ್ಇ ವರಿಗೆ ಬೀಳ್ಕೊಡುಗೆ ಸಮಾರಂಭ 28 ರಂದು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಅತಿ ವo. ಫಾದರ್ ಪೌಲ್ ರೇಗೊ ಅವರು 38 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಶಾಲಾ ಮುಖ್ಯ ಶಿಕ್ಷಕಿಯಾಗಿ ಅನೇಕ ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿ ಜಿಲ್ಲಾ ಮಟ್ಟದಲ್ಲಿ ಆದರ್ಶ ಶಿಕ್ಷಕಿ ಯಾಗಿ ಪ್ರಶಸ್ತಿ ಪಡೆದ ಕುರಿತು ಅಭಿನಂದನೆಯನ್ನೂ ಸಲ್ಲಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಶಿಕ್ಷಕಿ ಗೀತಾ ನೋರೊನ್ನ ರವರು ತಮ್ಮ ಅನಿಸಿಕೆಗಳನ್ನು ಹoಚಿಕೊಂಡರು. ಹಿರಿಯ ಶಿಕ್ಷಕಿ ಅನ್ನಿ ಕ್ರಾಸ್ತಾ ರವರು ಸನ್ಮಾನ ಪತ್ರ ವಾಚಿಸಿದರು. ಮುಖ್ಯ ಶಿಕ್ಷಕಿ ಶಾಂತಿ ರಾಣಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಕಾರ್ಯಕ್ರಮ ನಿರೂಪಿಸಿ, ಜೋತಿ ಡಿಸಿಲ್ವಾರವರು ವಂದಿಸಿದರು. ವೇದಿಕೆಯಲ್ಲಿ ಸೈಂಟ್ ಮೇರಿಸ್ ಪ. ಪೂ. ಕಾಲೇಜಿನ ಪ್ರಾoಶುಪಾಲೆ ರೇಷ್ಮಾ ಫೆರ್ನಾಂಡಿಸ್, ಹೋಲೀ ರೋಸರಿ ಆಂಗ್ಲ ಮಾಧ್ಯಮ ಶಾಲೆಯ ಮು. ಶಿಕ್ಷಕಿ ಸಿ. ತೆರೆಜಾ ಶಾಂತಿ, ಸೈಂಟ್ ಮೇರಿಸ್ ಫ್ರೌಢ ಶಾಲಾ ಶಿಕ್ಷಕಿ ಸಿ. ಚೇತನ, ಕಿಂಡರ್ ಗಾರ್ಡನ್ ಮುಖ್ಯ ಶಿಕ್ಷಕಿ ಶೈಲಾ ಲೂವಿಸ್ ಹಾಗೂ ಡೋರಾ ಸುವರಿಸ್ ಅವರ ಸಹೋದರಿ ಕವಿತಾ ಸುವಾರಿಸ್ ಉಪಸ್ಥಿತರಿದ್ದರು.
ಕುಂದಾಪುರ – ಸಂತ ಮೇರಿಸ್ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರತಿ ಸುವಾರಿಸ್ ಇವರಿಗೆ ಬೀಳ್ಕೊಡುಗೆ ಸಮಾರಂಭ