ಕುಂದಾಪುರ : ಚಿಕ್ಕನಸಾಲು ರಸ್ತೆ ಕಾಂಕ್ರೀಟುಕರಣಗೊಂಡು 14 ವರ್ಷಗಳಾದರೂ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್ ಅಳವಡಿಕೆಯಾಗಿಲ್ಲ – ಈ ಭಾಗದ ಜನರು ಅಷ್ಟೂ ನತದ್ರಷ್ಟರೆ?


ಕುಂದಾಪುರ,ಮಾ.7: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಮುಖ್ಯ ರಸ್ತೆಗಳನ್ನು ಬಿಟ್ಟರೆ, ನಂತರ ಅತ್ಯಂತ ಜನಸಂಚಾರ ಬಾಹನ ಸಂಚಾರ ಇರುವುದು ಚಿಕ್ಕನಸಾಲು ರಸ್ತೆಯಲ್ಲಿರುವುದು. ಆದರೆ ಈ ರಸ್ತೆಯ ಸ್ಥಿತಿ ನೋಡಿದರೆ ಬಹಳ ಚಿಂತಾಜನಕ. ಈ ರಸ್ತೆ ಕಾಂಕ್ರೀಟುಕರಣವಾಗಿ ಸುಮಾರು 14 ವರ್ಷಗಳಾದರೂ, ಇನ್ನೂ ಕೂಡ ಚಿಕ್ಕನಸಾಲು ರಸ್ತೆಯುದ್ದಕ್ಕೂ ಪಾದಚಾರಿಗಳಿಗಾಗಿ ಇರುವ ರಸ್ತೆ ಪಕ್ಕಗಳಲ್ಲಿ ಇಂಟರ್‍ಲಾಕ್‍ಗಳನ್ನು ಪೂರ್ತಿಯಾಗಿ ಹಾಕದೆ, ಪಾದಚಾರಿಗಳಿಗೆ, ಸ್ಥಳೀಯರಿಗೆ, ವಾಕಿಂಗ್ ಮಾಡುವರಿಗೆ ತುಂಬ ಅನಾನುಕೂಲವಾಗಿದೆ.
ಈ ವಾರ್ಡುಗಳ ಚುನಾಯಿತ ಪುರಸಭಾ ಸದಸ್ಯರು ಕಣ್ಣುಗಳು ಇದ್ದು ಕುರುಡರಂತೆ ಇದ್ದಾರೆ. ಪುರಸಭಾ ಅಧಿಕಾರಿಗಳು ಕೂಡ ಗಮನ ಹರಿಸದೆ ದಿವ್ಯ ನಿರ್ಲಕ್ಷ ಮಾಡಿದ್ದಾರೆ. ಈ ರಸ್ತೆಯ ಒಂದು ಪಕ್ಕದಲ್ಲಿ ಪೈಪ್ ಲೈನ್ ಕಾಮಾಗಾರಿಕೆಗಾಗಿ ರಸ್ತೆ ಅಗೆದು, ಪೈಪ್ ಲೈನ್ ಮುಗಿಸಿ ಎಷ್ಟೊ ವರ್ಷಗಳಾಗಿವೆ. ಅಂದು ಪೈಪ್ ಲೈನ್ ಕಾಮಾಗಾರಿಯವರು ಕಾಮಗಾರಿಗೆಗಾಗಿ ರಸ್ತೆ ಪಕ್ಕಗಳಲ್ಲಿ ಅಗೆದಾಗ, ಮಣ್ಣಿನ ಜೊತೆ ಕೆಳಗಡೆ ಇದ್ದ ದೊಡ್ಡ ದೊಡ್ಡ ಶಿಲೆಕಲ್ಲುಗಳು ಮೇಲೆಕ್ಕೆ ಹಾಕಿದರು, ಕಾಮಾಗಾರಿಕೆ ಮುಗಿದಾಗ, ಕಾಮಾಗಾರಿಯವರು ನೆಪಕ್ಕೆ ಮಾತ್ರ ಅಗೆದಲ್ಲಿ ಮಣ್ಣು ಆಚೆ ಇಚೆ ಮಾಡಿ ಮಣ್ಣು ಕಲ್ಲು ರಾಶಿ ಹಾಕಿ ಮುಚ್ಚಿದ ನಾಟಕವಾಡಿದ್ದಾರೆ, ಆ ದೊಡ್ಡ ದೊಡ್ಡ ಶಿಲೆ ಕಲ್ಲುಗಳನ್ನು ಮೇಲ್ಗಡೇಯೆ ಇದ್ದು, ಅವುಗಳು ಜನರು ನಡೆದಾಡುವ ಕಡೆಗಳಲ್ಲಿ ಇವೆ. ಅವುಗಳು ಪಾದಚಾರಿಗಳ ಕಾಲಿಗೆ ತಾಗಿ ಅವರು ಬೀಳುವ ಅಪಾಯವಿದೆ. ಇದಕ್ಕಾಗಿ ಪಾದಚಾರಿಗಳು ನಡೆಯಲು ಹೆದರಿ, ಅಸಾಧ್ಯವಾಗಿ ವಾಹನ ಸಂಚಾರ ಮಾಡುವ ಕಾಂಕ್ರೀಟು ರಸ್ತೆಯ ಮೇಲೆ ಬಂದು ನಡೆಯಬೇಕಾಗುತ್ತದೆ, ಆ ಸಂದರ್ಭದಲ್ಲಿ ವಾಹನಚಾಲಕರಿಂದ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲಾ.
ಕಾಂಕ್ರೀಟು ರಸ್ತೆಯ ಅಂಚಿನಿಂದ ಕೆಲವು ಕಡೆ ಎಷ್ಟೊ ತಗ್ಗಿದ್ದು, ಜನರು ಒಡಾಡಲು ಹರಸಾಹಸ ಪಡೆಬೇಕು, ಇದಲ್ಲದೆ ದ್ವಿ ಚಕ್ರ ವಾಹನದವರು ಕಾಂಕ್ರೀಟು ರಸ್ತೆಯಲ್ಲಿ ಮೇಲೆರುವ ಸಂದರ್ಭದಲ್ಲಿ ಸ್ಕೀಡ್ ಆಗಿ ಬಿದ್ದವರು ಎಷ್ಟೊ ಜನ ಇದ್ದಾರೆ. ಪೈಪ್ ಕಾಮಗಾರಿ ಮುಗಿಸಿದಾಗ ಕಾಮಗಾರಿ ಗುತ್ತಿಗೆ ತೆಗೆದುಕೊಂಡವರ ಹತ್ತಿರ ಅವರು ಅಗೆದ ಕಲ್ಲು ಮಣ್ಣು ಸರಿಯಾದ ರೀತಿಯಲ್ಲಿ ಪುನ ಕಲ್ಲುಗಳನ್ನು ಅಡಿ ಹಾಕಿ, ಅದರ ಮೇಲೆ ಮಣ್ಣು ಸಮಾನಂತರವಾಗಿ ಹಾಕಿಸಿಕೊಳ್ಳುವ ಹೊಣೆಗಾರಿಕೆ ಯಾರಿದು ? ಪರಸಭೆಗೆ ಸಂಬಂಧ ಪಟ್ಟಿದ್ದು ಅಲ್ಲವೆ ? ಅದಿಲ್ಲದಿದ್ದರೆ ಆರಿಸಿ ಬಂದ ಆ ವಾರ್ಡುಗಳ ಪುರಸಭಾ ಸದಸ್ಯರ ಹೊಣೆಯಲ್ಲವೇ? ಯಾವ ಹೊಣೆ ಇವರಿಗಿದೆ, ಇಷ್ಟೂ ಮಾಡಲಿಕಾಗದಿದ್ದಲ್ಲಿ, ಪುರಸಭೆಗಳಲ್ಲಿ ಸದಸ್ಯರು ಯಾಕೆ ಬೇಕು?
ನಗರದ ಎರಡು ಮುಖ್ಯ ರಸ್ತೆಗಳಲ್ಲಿ ಇಂಟ್ಲಾಕ್‍ಗಳನ್ನು ಹಾಕುವುದು, ತೆಗೆಯುವು ನಡೆಯುತ್ತಾ ಇದೆ, ಇಲ್ಲಿ ಪುರಸಭೆಯವರು ಗಮನಿಸಬೇಕು, ಈ ಮುಖ್ಯ ರಸ್ತೆಗಳಲ್ಲಿ ಇರುವ ಕಟ್ಟಡ, ಮನೆಗಳಿಗೆ ವಿಧಿಸುವ ತೆರಿಗೆ ಮತ್ತು ಚಿಕ್ಕನಸಾಲು ರಸ್ತೆಯ, ಮತ್ತು ಕುಂದಾಪುರ ಪುರಸಭೆಯ ಉಳಿದ ರಸ್ತೆಗಳಲ್ಲಿರುವ ಕಟ್ಟಡ, ಮನೆಗಳು ಕಟ್ಟುವ ತೆರಿಗೆ ಒಂದೇ ತೇರನಾಗಿದೆ, ಹಾಗಾದರೆ ಚಿಕ್ಕನಸಾಲು ಮತ್ತು ಇಅತರ್ ರಸ್ತೆಗಳಿಗೆ ಯಾಕೆ ಇಂತಹ ದಿವ್ಯ ನಿರ್ಲಕ್ಷ? ಚಿಕ್ಕಸಾಲು ರಸ್ತೆಯ ಇಂಟರ್‍ಲಾಕ್ ಕಾಮಾಗಾರಿ ಎಷ್ಟೊ ಹಂತಗಳಲ್ಲಿ ಸಾಗಿ, ಈಗ ಚಿಕ್ಕನಸಾಲು ರಸ್ತೆಯ ಕ್ರಾಸ್ತಾ ವರ್ಕ್‍ಶಾಪ್ ಹತ್ತಿರದವರೆಗೆ ಸಾಗಿ ನಿಂತಿದೆ. ನಂತರದ ಚಿಕ್ಕನಸಾಲು ರಸ್ತೆಯ ಉದಕ್ಕೂ ಎರಡು ಕಡೆಗಳಲ್ಲಿ ಇಂಟರ್‍ಲಾಕ್ ಹಾಕಲೇ ಇಲ್ಲ. ಸುಮಾರು 14 ವರ್ಷಗಳು ಸಂದರು ಇದು ಸಾಧ್ಯವಾಗಲಿಲ್ಲ ಅಂದರೆ ನಾಚಿಕೆಗೇಡಿನ ಸಂಗತಿಯಲ್ಲವೇ ?. ನಿಜಕ್ಕೂ ಇದು ಇಲ್ಲಿನ ಜನರ, ಪಾದಚಾರಿಗಳ ದೌಭಾಗ್ಯವೆಂದೇ ಹೇಳಬೇಕು. ಇಷ್ಟು ವರ್ಷಗಳು ಸಂದರೂ ಇಂಟರ್ ಲಾಖ್‍ಗಳನ್ನು ಅಳವಡಿಸಲು ಯಾಕೆ ಸಾಧ್ಯವಾಗಲಿಲ್ಲ? ಇದು ನಮ್ಮ ಅಭಿವ್ರದ್ದಿಯೆ ? ಈ ರೀತಿಯ ನಡವಳಿಕೆಯಂದರೆ ಇದು ದಿವ್ಯ ನಿಲಕ್ಷವಲ್ಲವೇ ಹೌದು ? ಈ ಭಾಗದ ಜನರು ಅಷ್ಟೂ ನತದ್ರಷ್ಟರೆ? ಚಿಕ್ಕನಸಾಲು ರಸ್ತೆಯ ಈ ಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಭಾಗ್ಯ ಯಾವಾಗ ಬರಬಹುದೊ ಎಂದು ಜನರು ಕಾಯುತ್ತಾ ಇದ್ದಾರೆ. ಹಾಗೇ ಈ ಭಾಗದ ಜನರು ಕಾಯುದ್ದ ಇದ್ದಾರೆ ಮತ ಕೇಳಲು ಯಾರು, ಯಾವಾಗ ಬರುತ್ತಾರೆಂದು.
ಪುರಸಭೆಯವರು ಪುರಸಭೆಯ ಸದಸ್ಯರು ಗಮನಿಸಬೇಕು, ಚಿಕ್ಕನಸಾಲು ರಸ್ತೆ, ಕುಂದಾಪುರ ನಗರದ ಒಂದು ಮುಖ್ಯವಾದ ದ್ವಾರ. ಈ ರಸ್ತೆ ಹೈವೆಯನ್ನು ಸಂದಿಸುತ್ತದೆ, ಹೈವೆಯ ಬಹು ದೂರದ ಉತ್ತರದಿಂದ ರೋಗಿಗಳನ್ನು ಹೊತ್ತುಕೊಂಡು ಬರುವ ಅಂಬ್ಯುಲೆನ್ಸಗಳು, ಲಘುವಾಹನಗಳು, ದ್ವೀ ಚಕ್ರವಾಹನದವರು ನಿತ್ಯ ಸಂಚಾರ ಮಾಡುತ್ತಾರೆ, ಅವರಿಗೆ ಚಿಕ್ಕನಸಾಲು ರಸ್ತೆ ದ್ವಾರದಲ್ಲೆ ಅಡಚಣೆಯಾಗುತದೆ, ಕಾರಣ ಪಾದಚಾರಿಗಳಿಗೆ ಸಮತಟ್ಟು ಮಾಡದೆ, ಅಥವ ಇಂಟರ್ಲಾಕ್‍ಗಳನ್ನು ಅಳವಡಿಸದೆ ಇರುವುದು. ಹಾಗೆ ಉತ್ತರ ಕಡೆಯ ಹೈವೆಯಿಂದ ಕೂಡ ಈ ದ್ವಾರ ಬಳಸಿಕೊಳ್ಳುತಿದ್ದಾರೆ. ವಾಹನ ಸಂಚಾರ, ಜನ ಸಂಚಾರ ಸುಗಮವಾಗಲು ಇಲ್ಲಿ ಬಹುಬೇಗನೆ ಇಂಟರ್ಲಾಕ್ಗಳನ್ನು ಅಳವಡಿಸಬೇಕು. ಇಲ್ಲಿ ಅಲ್ಲದೆ ಚರ್ಚ್ ರಸ್ತೆಯಲ್ಲೂ, ಮತ್ತು ಕುಂದಾಪುರ ಅನೇಕ ಒಳಗಡೆ ರಸ್ತೆಗಳಲ್ಲಿ ಕೂಡ ಇಂಟರ್ಲಾಕ್, ಅಳವಡಿಸುವ ಕೆಲಸವಾಗಬೇಕು. ಕುಂದಾಪುರ ಸುಂದರ ನಗರ ಎಂಬುದು ಅರೆಸತ್ಯ ಇಂತಹ ರಸ್ತೆಗಳು ಕುಂದಾಪುರ ಪುರಸಭೆಯೊಳಗೆ ಇರುವುದು ನಾ ಲಾಯಕ್ !!
ಮತ ಕೇಳುವಾಗ ಎಲ್ಲ ಮನೆಗಳಿಗೆ ಹೋಗುವ ಸದಸ್ಯರೆ, ಪುರಸಭೆಗೆ ಆರಿಸಿ ಬಂದ ಸದಸ್ಯರೆ ನಂತರ, ಅಪರೂಪಕ್ಕೆ ನಿಮ್ಮ ನಿಮ್ಮ ವಾರ್ಡಿನ ರಸ್ತೆಗಳಲ್ಲಾದರೂ ನಡೆದುಕೊಂಡು ಬಂದು ಸಮಸ್ಯೆಗಳನ್ನು ತಿಳಿದುಕೊಂಡು ಬಂದು ಸಮಸ್ಯೆ ಇದ್ದಲ್ಲಿ ಅವುಗಳನ್ನು ಪರಿಹರಿಸಿ.