ಕುಂದಾಪುರ ಕಾಂಗ್ರೆಸ್: ವಿಶ್ವ ಮಹಿಳಾ ದಿನಾಚರಣೆ.

JANANUDI.COM NETWORK

ಕುಂದಾಪುರ,ಫೆ, 8; ಯಾವುದೇ ದೇಶದ, ಧರ್ಮದ ಕುಟುಂಬ ಅಥವಾ ಸಮಾಜದ ಅಭಿವೃದ್ಧಿ ಮಹಿಳೆಯರಿಂದ ಮಾತ್ರವೇ ಸಾಧ್ಯ. ಮಹಿಳೆಯರು ಒಗ್ಗಟ್ಟಾದರೆ ಯಾವುದೇ ಬದಲಾವಣೆ ಸಾಧ್ಯವಿದೆ.‌ ಮಹಿಳೆಯರಲ್ಲಿ ಅಧಮ್ಯವಾದ ಪ್ರತಿಭೆ ಇದೆ.‌ ಆದರೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಪ್ರತಿಭೆಯ ಅನಾವರಣ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ ಹೇಳಿದ್ದಾರೆ.
ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಕೇವಲ‌ ಮಹಿಳಾ ಮೀಸಲಾತಿಗಾಗಿ ಕಾಯದೆ ಎಲ್ಲಾ ರಂಗದಲ್ಲೂ ತಮ್ಮ ತಮ್ಮ ಸ್ವಪ್ರತಿಭೆಯಿಂದ ಅವಕಾಶ ಗಿಟ್ಟಿಸಿಕೊಳ್ಳಬೇಕು. ಜನಪ್ರತಿನಿಧಿಯಾಗಿ ಆಯ್ಕೆಯಾದ ಮಹಿಳೆಯರು ಯಾವುದೇ ಪುರುಷ ಸದಸ್ಯರ ಸಹಾಯ ಪಡೆಯದೆ ಕಾರ್ಯಾಚರಿಸಬೇಕು. ಆಗ ಮಾತ್ರವೇ ಮಹಿಳಾ ದಿನಾಚರಣೆ ಅರ್ಥ ಪಡೆದುಕೊಳ್ಳುತ್ತದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ ಹೇಳಿದ್ದಾರೆ.
ಈ ಸಂಧರ್ಭದಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ವಿದ್ಯಾಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್ ಮಹಿಳಾ ಕಾಂಗ್ರೆಸ್ ನೂತನ ಅಧ್ಯಕ್ಷೆ, ಪುರಸಭಾ ಸದಸ್ಯೆ ಶ್ರಿಮತಿ ದೇವಕಿ ಸಣ್ಣಯ್ಯ ಸನ್ಮಾನ ಪತ್ರ ವಾಚಿಸಿದರು.
ಈ ಸಂಧರ್ಭದಲ್ಲಿ ಹಿರಿಯ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಕ್ರಾಸ್ಟೋ, ವಿಕಾಸ್ ಹೆಗ್ಡೆ, ಇಂಟಕ್ ಅಧ್ಯಕ್ಷ ಚಂದ್ರ ಅಮೀನ್, ಜಿಲ್ಲಾ ಇಂಟಕ್ ಉಪಾಧ್ಯಕ್ಷ ರೋಶನ್ ಶೆಟ್ಟಿ ಆರ್.ಜಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಂತಿ ಪಿರೇರಾ, ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಜ್ಯೋತಿ ಪುತ್ರನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಆಶಾ ಕರ್ವಾಲೋ, ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೋಭಾ ಸಚ್ಚಿದಾನಂದ, ಕೋಣಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಸಂತಿ ಮೊಗವೀರ, ಪಂಚಾಯತ್ ಸದಸ್ಯೆಯರಾದ ಜಾನಕಿ ಬಿಲ್ಲವ, ಸೌಮ್ಯಾ ಮೊಗವೀರ, ಜಾನೆಟ್ ಮೆಂಡೋನ್ಸಾ, ಗೀತಾ ಎಸ್, ಎಚ್.ಕೆ ಸವಿತಾ, ಸುಮತಿ ಶಂಕರ್ ಮೆಂಡನ್, ಗಿರಿಜಾ ಆರ್. ಶೆಟ್ಟಿ, ಪುರಸಭಾ ಸದಸ್ಯೆಯರಾದ ಲಕ್ಷ್ಮೀ ಭಾಯಿ, ಪ್ರಭಾವತಿ ಶೆಟ್ಟಿ, ವಾಣಿ ಆರ್. ಶೆಟ್ಟಿ, ಜ್ಯೋತಿ ಡಿ. ನಾಯ್ಕ್, ಸುವರ್ಣ ಡಿ ಅಲ್ಮೇಡಾ, ಭವಾನಿ ಭಾಯಿ, ಭಾಗ್ಯ ಲಕ್ಷ್ಮೀ, ಅಂಬಿಕಾ, ಸೀಮಾ ಪೂಜಾರಿ, ಸುಶೀಲಾ ಪಿ ಪೂಜಾರಿ, ಮುತ್ತು, ಜ್ಯೋತಿ ಪೂಜಾರಿ, ಸುಗುಣ ಹಂಗಳೂರು, ಜಸಿಂತಾ ವಿನಯ್ ಪಾಯ್ಸ್, ಲಲಿತಾ, ವೀಣಾ ಎನ್ ರಾವ್, ಕುಸುಮಾ, ಸಂಗೀತಾ ಮುಂತಾದವರು ಉಪಸ್ಥಿತರಿದ್ದರು.
ಜ್ಯೋತಿ ಕೆ ಸ್ವಾಗತಿಸಿದರು. ಜ್ಯೋತಿ ವಿ. ಪುತ್ರನ್ ಪ್ರಸ್ತಾವಿಕವಾಗಿ ಮಾತನಾಡಿದರು. ಜ್ಯೋತಿ ಡಿ. ನಾಯ್ಕ್ ಪ್ರಾರ್ಥನೆ ಮಾಡಿದರು. ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ ವಂದಸಿದರು.