

ಕುಂದಾಪುರ. ಜು.12: ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಮೋದಿ ಹಾಗೂ ಅದಾನಿ ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ, ಈ ನಿರ್ಭೀತಿ ನಡೆಯನ್ನು ಸಹಿಸಿಕೊಳ್ಳದೆ ಮೋದಿ ಪದನಾಮ ಬಳಕೆಯನ್ನೇ ನೆಪವಾಗಿರಿಸಿಕೊಂಡು ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೊಳಿಸಿದ ಕೇಂದ್ರ ಸರಕಾರ ಹಾಗೂ ಬಿಜೆಪಿಯ ಸೇಡಿನ ಹುನ್ನಾರವನ್ನು ಪ್ರತಿಭಟಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಇಂದು ದಿನಾಂಕ 12 -07 -2023 ಬುಧವಾರ ಬೆಳಿಗ್ಗೆ 10 ರಿಂದ ಮೌನ ಧರಣಿ ಶಾಸ್ತ್ರಿ ವೃತ್ತ ಬಳಿ ಆರಂಭಿಸಿದೆ.
ಮಾಜಿ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ ( ಎಂ. ಎಲ್. ಎ. ಅಭ್ಯರ್ಥಿ) ಹರಿಪ್ರಸಾದ್ ಶೆಟ್ಟಿ ( ಬ್ಲಾಕ್ ಅಧ್ಯಕ್ಷರು) ಶಿವರಾಮ ಶೆಟ್ಟಿ ( ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ) ಬಿ. ಹೆರಿಯಣ್ಣ, ಕೇದೂರು ಸದಾನಂದ ಶೆಟ್ಟಿ, ಅಶೋಕ್ ಪೂಜಾರಿ ( ಬಿಲ್ಲವರ ಸಂಘದ ಅಧ್ಯಕ್ಷರು) , ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ ( ಜಿಲ್ಲಾ ವಕ್ತಾರರು), ಇಚ್ಚಿತಾರ್ಥ ಶೆಟ್ಟಿ ( ಯುವ ಕಾಂಗ್ರೆಸ್ ಅಧ್ಯಕ್ಷ) ವಿನೋದ್ ಕ್ರಾಸ್ತಾ ( ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ), ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರ ಶೇಖರ್ ಖಾರ್ವಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಅಬ್ಬು, ಎನ್ ಎಸ್ ಯು ಐ ನಾ ಸುಜನ್ ಶೆಟ್ಟಿ, ಗಣೇಶ್ ಶೇರೆಗಾರ್, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ, ಚಂದ್ರ ಶೇಖರ್ ಶೆಟ್ಟಿ, ಗಂಗಾಧರ್ ಶೆಟ್ಟಿ, ಜಾನಕಿ ಬಿಲ್ಲವ, ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ರಮೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಮೇಬಲ್ ಡಿಸೋಜ, ಕೇಶವ್ ಭಟ್, ಅಶೋಕ್ ಸುವರ್ಣ, ದಿವಾಕರ್ ಶೆಟ್ಟಿ ಕೋಣಿ ಮುಂತಾದ ಪ್ರಮುಖ ನಾಯಕರು ಈ ಧರಣಿಯಲ್ಲಿ ಪಾಲ್ಗೊಂಡರು.
ಈ ಧರಣಿ ಸಂಜೆ 5 ಗಂಟೆ ತನಕ ನಡೆಯಲಿದೆಯೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯಿ ತಿಳಿಸಿದೆ.






