JANANUDI.COM NETWORK

ಕುಂದಾಪುರ,ಫೆ.9. ಕುಂದಾಪುರ ಚರ್ಚ್ ರಸ್ತೆಯಲ್ಲಿ,ಕುಂದಾಪುರ ಚರ್ಚ್ ಸಮೀಪ ನಿನ್ನೆರಾತ್ರಿ ಕಾರು ಮತ್ತು ಬುಲೆಟ್ ಬೈಕ್ ನಡುವೆ ಅಪಘಾತ ಏರ್ಪಟ್ಟು ಇಬ್ಬರು ಯುವಕರ ದಾರುಣ ಸಾವಿಗೆ ಇಡಾದ ಘಟನೆ ನಡೆದಿದೆ.
ಬಾಂಡ್ಯಾ ನಿವಾಸಿ ಕಿರಣ್ ಮೇಸ್ತಾ (24) ಮತ್ತು ನೇರಳಕಟ್ಟೆ ನಿವಾಸಿ ರವೀಂದ್ರ ಕುಮಾರ್ (24) ಮ್ರತ ಪಟ್ಟ ದುರ್ಧೈವಿಗಳು. ಈ ಯುವಕರು ಕುಂದಾಪುರ ಕೋಡಿಯ ಚಕ್ರಮ್ಮ ದೇವಸ್ಥಾನದ ಜಾತ್ರೆಗೆ ಹೋಗುತಿದ್ದರು ಎಂದು ತಿಳಿದು ಬಂದಿದೆ. ಅಪಘಾತವಾದ ಎಲ್ಟೊ ಕಾರು ಶ್ಯಾಮಲ ಎಂಬವರಿಗೆ ಸೇರಿದ್ದು ಅವರ ಮೇಲೆ ಕುಂದಾಪುರ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ