JANANUDI.COM NETWORK

ಕುಂದಾಪುರ,ಫೆ.9: ಕುಂದಾಪುರ ಐಸಿವೈಎಮ್ ಸಂಘಟನೇಯು ಕುಂದಾಪುರ ವಲಯ ಮಟ್ಟದ 30 ಗಜದ ಕ್ರಿಕೆಟ್ ಪಂದ್ಯಾಟವನ್ನು ಭಾನುವಾರ 7 ರಂದು ಕುಂದಾಪುರ ಚರ್ಚ್ ಮೈದಾನದಲ್ಲಿ ಆಯೋಜಿಸಿತ್ತು. ಇದರ ಉದ್ಘಾಟನೆಯನ್ನು ಬ್ಯಾಟಿಂಗ್ ಮಾಡುವ ಮೂಲಕ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ನೇರವೆರಿಸಿದರು.
ಕುಂದಾಪುರ ವಲಯದಿಂದ ಈ ಪಂದ್ಯಾಟದಲ್ಲಿ 18 ತಂಡಗಳು ಭಾಹವಹಿಸಿದ್ದು ಬಸ್ರೂರು (ಬಿ) ತಂಡವು ಪ್ರಥಮ ಸ್ಥಾನ ಪಡೆದು ಛಾಂಪಿಯನ್ ಶಿಫ್ ಗೆದ್ದುಕೊಂಡಿತು, ದ್ವಿತೀಯ ಸ್ಥಾನ ಬಸ್ರೂರು (ಎ) ರನ್ನರ್ ಶಿಫ್ ಪಡೆಯಿತು. ಪುರುಷರಲ್ಲಿ ಸ್ಟೀಫನ್ ಕರ್ವಾಲ್ಲೊ ಪಂದ್ಯ ಶ್ರೇಷ್ಟರಾಗಿ, ಮಹಿಳೆಯರಲ್ಲಿ ಆಶಾ ಡಿಮೆಲ್ಲೊ ಪಂದ್ಯ ಶ್ರೇಷ್ಟರಾಗಿ, ಉತ್ತಮ ದಾಂಡಿಗನಾಗಿ ಜೊಯೆಲ್ ಕರ್ವಾಲ್ಲೊ, ಉತ್ತಮ ಎಸೆತಗಾರನಾಗಿ ಪ್ರವೀಣ್ ಡಿಸೋಜಾ, ಉತ್ತಮ ಸರಣಿ ಆಟಗಾರನಾಗಿ ಸ್ಟೀಫನ್ ಕರ್ವಾಲ್ಲೊ ಆಯ್ಕೆಯಾದರು.ವಿಜೇತರಿಗೆ ನಗದು ಮತ್ತು ಟ್ರೋಫಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಪ್ರಾಂಶುಪಾಲರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್, ಉಪಾಧ್ಯಕ್ಷ ಲುವಿಸ್ ಜೆ.ಫೆರ್ನಾಂಡಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, 20 ಆಯೋಗಗಳ ಸಂಯೋಜಕಿ ಪ್ರೇಮಾಡಿ ಕುನ್ಹಾ, ಐಸಿವೈಎಮ್ ಅಧ್ಯಕ್ಷ ರೆನ್ಸನ್ ಡಿಸೋಜಾ,ಕಾರ್ಯದರ್ಶಿ, ಗ್ಲೆನ್ ಡಿಸೋಜಾ,ಕ್ರೀಡಾ ಕಾರ್ಯದರ್ಶಿಯಾದ ಜೊಸ್ವಿನ್ ಡಿಸೋಜಾ, ಸಚೇತಕರಾದ ಜೆಸನ್ ಪಾಯ್ಸ್, ಶಾಂತಿ ಬಾರೆಟ್ಟೊ ಇನ್ನಿತರರು ಉಪಸ್ಥಿತರಿದ್ದರು.

