ಕುಂದಾಪುರ,ಅ. 31/07/2024 ರಂದು LKG ಮತ್ತು UKG ಮಕ್ಕಳು ಹಸಿರು ಬಣ್ಣ ಮತ್ತು ಹಸಿರು ತರಕಾರಿ ದಿನವನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು, ಅಧ್ಯಕ್ಷರು, ಪ್ರಾಂಶುಪಾಲರು, ಸಹಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು.
ಮುಖ್ಯ ಅತಿಥಿಗಳಾದ ರೆ.ಫಾ.ಇಮ್ಯಾನುಯೆಲ್ ಜಯಕುಮಾರ್ ಅವರು ಚಿಕ್ಕ ಮಕ್ಕಳು ಹಸಿರು ಪರಿಸರ, ಪರಿಸರವನ್ನು ಪ್ರೀತಿಸಬೇಕು ಮತ್ತು ಹಸಿರು ಸೊಪ್ಪಿನ ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು.
ಶಾಲೆಯ ಕರೆಸ್ಪಾಂಡೆಂಟ್ ಶ್ರೀಮತಿ ಐರಿನ್ ಸಲ್ಲಿನ್ಸ್ ಮಾತನಾಡಿ, ಎಲ್ಲಾ ಪುಟಾಣಿಗಳು ಹಸಿರು ಉಡುಗೆಯಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ, ಅದೇ ರೀತಿ ನೀವು ಪರಿಸರವನ್ನು ಹಸಿರಾಗಿಡಬೇಕು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅನಿತಾ ಡಿ ಸೋಜಾ ಅವರು ಕೆಲವು ಆಟಗಳನ್ನು ಆಡಿಸುವ ಮೂಲಕ ಮಕ್ಕಳನ್ನು ರಂಜಿಸಿದರು. ನೀವು ಸದಾ ಹೀಗೆ ಹಸಿರಾಗಬೇಕು ಎಂದರು.
ಚಿಕ್ಕ ಮಕ್ಕಳು ಹಸಿರು ಬಣ್ಣಗಳ ಬಗ್ಗೆ ಹಾಡನ್ನು ಹಾಡಿದರು ಮತ್ತು ಯುಕೆಜಿ ಬಾಲಕಿಯರಾದ ರುಥ್ವಿ ಚಂದನಾ ಮತ್ತು ಮಿಜ್ಭಾಷೇಕ್ ಹಸಿರು ಬಣ್ಣ ಮತ್ತು ತರಕಾರಿಗಳ ಕುರಿತು ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಸಿಎಸ್ಐ ಕ್ರಪಾ ವಿದ್ಯಾಲಯ ಹಾಗೂ ಯುಬಿಎಂಸಿ ಶಾಲಾ ಶಿಕ್ಷಕರು ಹಾಗೂ ಸಹಾಯಕಿಯರು ಹಾಗೂ ಅಂಗನವಾಡಿ ಶಿಕ್ಷಕರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿದ್ಯಾ ಹಾಗೂ ಎಲ್ಲಾ ಮಕ್ಕಳನ್ನು ಸಿಎಸ್ಐ ಕೃಪಾ ವಿದ್ಯಾಲಯ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸವಿತಾ ಸ್ವಾಗತಿಸಿದರು. ಶ್ರೀಮತಿ ರೇಖಾ ಅಲ್ಮೇಡಾ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು ಮತ್ತು ಶ್ರೀಮತಿ ವಿಲ್ಮಶಿಲೆಟ್ ಕಾರ್ಯಕ್ರಮ ನಿರೂಪಿಸಿದರು
Kundapur C.S.I. At Krupa Vidyalaya Nursery School Celebrating green color and green vegetable day
On Wednesday 31/07/2024, LKG and UKG children celebrated Green Color and Green Vegetable Day.CSI Krupa Vidyalaya Nursery School
The Headmistress of CSI Krupa Vidyalaya School Mrs. Savitha welcomed the guests, President, Principal, co-teachers, Anganwadi teacher Mrs. Vidya and all the children who arrived for the function.
Rev.Emmanuel Jayakumar, the chief guest, told the young children that we should love the green environment, environment and we should eat more green leafy vegetables as it is good for health.
School Correspondent Mrs. Irene Sallins said that all the little girls are looking very cute in green dress, similarly you should keep the environment green.
School Principal Mrs. Anita D Souza entertained the children by playing some games. Said you should be green like this.
Young children sang a song about green colors and UKG girls Ruthvi Chandana and Mizbhasheik gave a speech about green color and vegetables.
CSI Krapa Vidyalaya and UBMC school teachers and assistants and Anganwadi teacher were present in the program. Mrs. Rekha Almeida thanked them all. and Mrs. Vilmashilet presented the program.