![](https://jananudi.com/wp-content/uploads/2023/10/0-jananudi-network.jpg)
![](https://jananudi.com/wp-content/uploads/2023/10/9ca7092c-38bb-4c78-9629-65a4c2919125.jpeg)
ಕುಂದಾಪುರ: ಕುಂದಾಪುರದ ಚಿಕ್ಕನಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಕಾರಿನಲ್ಲಿ ಬಂದ ಅಪರಿಚಿತನೊರ್ವ ಚೂರಿ ಇರಿದು ಪರಾರಿಯಾದ ಘಟನೆ ರವಿವಾರ ಸಂಜೆ ೭ ಗಂಟೆಯ ಹಾಗೆ ನಡೆದಿದೆ. ಕುಂದಾಪುರ ಮೂಲದ ರಾಘವೇಂದ್ರ (42) ಎಂಬವರು ಚೂರಿ ಇರಿತಕ್ಕೊಳಗಾದವರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮ್ರತ್ಯುವಶವಾಗಿದ್ದಾರೆ.
ನಿನ್ನೆ ಚೂರಿ ಇರಿತಕ್ಕೊಳಾದ ಅವರನ್ನು ಗಂಭೀರ ಗಾಯಗೊಂಡ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿಸಲಾಗಿತ್ತು. ರಾಘವೇಂದ್ರ ಅವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇನ್ನೊಂದು ಕಾರಿನಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿ ರಾಘವೇಂದ್ರ ಅವರ ಕಾರನ್ನು ಅಡ್ಡಗಟ್ಟಿ, ತೊಡೆಗೆ ಚೂರಿ ಇರಿದು, ಕಾರಿನಲ್ಲಿ ಪರಾರಿಯಾಗಿದ್ದನು
ಹಣಕಾಸು ಅಥವಾ ಇನ್ನು ಯಾವುದೋ ವೈಯಕ್ತಿಕ ಹಳೇ ದ್ವೇಷಕ್ಕೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ.ಘಟನೆ ನಿಖರವಾಗಿ ಯಾವ ಕಾರಣಕ್ಕಾಗಿ ನಡೆದಿದೆ ಈ ಕ್ರತ್ಯ ನಡೆದಿದೆ ಎಂಬದು ಮುಂದಿನ ತನಿಖೆಯಿಂದಷ್ಟೆ ತಿಳಿದುಬರಬೇಕಿದ್ದು. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ವೃತ್ತ ನಿರೀಕ್ಷಕ ನಂದ ಕುಮಾರ್, ಕುಂದಾಪುರ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.