ಕುಂದಾಪುರ ಬ್ಲಾಕ್ ಕಾಂಗ್ರೆಸ್:ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾ. ಮು. ಮಂತ್ರಿ ದಿ.ದೇವರಾಜ ಅರಸುರವರ ಜನ್ಮದಿನ ಆಚರಣೆ

ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಗೋಸ್ತ್ ೨೦ ರಂದು ಮಾಜಿ ಪ್ರಧಾನಿ ದಿ| ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ದಿ| ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಇಬ್ಬರು ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನದ ಮೂಲಕ ಕಾಂಗ್ರೆಸ್ ಮುಖಂಡರು ಗೌರವ ಸಲ್ಲಿಸಲಾಯಿತು.

      ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ “ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ಅಂದಿನ ಕಾಲದಲ್ಲೆ ನವಭಾರತದ ಕಲ್ಪನೆಯನ್ನು ಮಾಡಿ,ಆಧುನಿಕ ಭಾರತವನ್ನು ನಿರ್ಮಾಣ ಮಾಡಲು ಶ್ರಮಿಸಿದವರು. ಅವರಂತೆಯೇ ರಾಜ್ಯದಲ್ಲಿ ದೇವರಾಜ ಅರಸು ಅವರು ಸಹ ಸಾಮಾಜಿಕ ನ್ಯಾಯದ ಹರಿಕಾರರಾಗಿ, ದೀನದಲಿತರ, ಬಡವರ, ಹಿಂದುಳಿದ ವರ್ಗದವರ ಏಳಿಗೆಗಾಗಿ ಶ್ರಮಿಸಿ ಜನಪರ ಕಾಳಜಿಯುಳ್ಳ ನಾಯಕ” ಎಂದು ಹೆಸರು ಗಳಿಸಿದವರು.  

      ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ರಾಜೀವ್ ಗಾಂಧಿಯವರು ಆ ಕಾಲದಲ್ಲಿಯೇ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಕಂಡವರು. ನಾವಿಂದು ಕಾಣುತ್ತಿರುವ ತಂತ್ರಜ್ಞಾನ, ಆಧುನೀಕರಣಗಳೆಲ್ಲದರ ಬಗ್ಗೆ ಅವರು ಅಂದಿನ ದಿನಗಳಲ್ಲೇ ದಿಟ್ಟ ಹೆಜ್ಜೆ ಇಟ್ಟವರು. ಇನ್ನು ದೇವರಾಜ ಅರಸು ಅವರೊಬ್ಬ ಈ ರಾಜ್ಯ ಕಂಡ ನೆಚ್ಚಿನ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದವರು. ಅವರಂತಯೇ ಈಗ ನಮ್ಮ ಸಿದ್ದರಾಮಯ್ಯನವರು ಎಲ್ಲ ವರ್ಗದವರ ಬಗ್ಗೆ, ಕೆಳವರ್ಗದವರ ಬಗ್ಗೆ ಅತೀವವಾದ ಕಾಳಜಿಯುಳ್ಳ ನಾಯಕರಾಗಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಅವರ ಮೇಲೆ ಮೊಟ್ಟೆ ಎಸೆಯುವ ನೀಚ ಕೃತ್ಯವನ್ನು ಮಾಡಿರುವ ಬಿಜೆಪಿ, ಅತ್ಯಂತ ಕೀಳು ಮಟ್ಟಕ್ಕಿಳಿದಿದೆ” ಎಂದವರು ಕೀಡಿಕಾರಿದರು.

     ಪುರಸಭೆ ಸದಸ್ಯೆ ಪ್ರಭಾವತಿ ಶೆಟ್ಟಿ, ಪಕ್ಷದ ಮುಖಂಡ ಗಂಗಾಧರ ಶೆಟ್ಟಿ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕೆ. ವಿಕಾಸ್ ಹೆಗ್ಡೆ, ದೇವಕಿ ಸಣ್ಣಯ್ಯ, ರೇವತಿ ಶೆಟ್ಟಿ, ರಮೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಕೇಶವ ಭಟ್, ಜೋಸೆಫ್ ರೆಬೆಲೋ, ಅಭಿಜಿತ್ ಪೂಜಾರಿ, ದೋಲಿನ್, ಶೋಭಾ ಸಚ್ಚಿದಾನಂದ, ಸಂಗೀತ ಉಪಸ್ಥಿತರಿದ್ದರು.

     ಆಶಾ ಕರ್ವಾಲೋ ಸ್ವಾಗತಿಸಿ, ಜ್ಯೋತಿ ಡಿ. ವಂದಿಸಿದರು. ನಾರಾಯಣ ಆಚಾರ್ ಪ್ರಸ್ತಾವಿಸಿ, ಕಾರ್‍ಯಕ್ರಮ ನಿರೂಪಿಸಿದರು.