ಕುಂದಾಪುರ ಬ್ಲಾಕ್ ಕಾಂಗ್ರೆಸ್: ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮದಿನಾಚರಣೆ

JANANUDI.COM NETWORK

ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ಅಂಬೇಡ್ಕರ್ ಸಂವಿಧಾನ ರಚನೆಯಾಗದಿದ್ದಲ್ಲಿ ಈ ದೇಶದ ಹಿಂದುಳಿದ ವರ್ಗ ಹಾಗೂ ದಲಿತ ವರ್ಗದ ಜನತೆ ಮನುವಾದಿಗಳ ಶತಶತಮಾನಗಳ ಗುಲಾಮಗಿರಿಯಿಂದ ಇಂದಿಗೂ ಬಳಲುವಂತಾಗುತ್ತಿತ್ತು. ಇಂದಿಗೂ ಆ ವರ್ಗಕ್ಕೆ ವಿದ್ಯೆ, ಅಧಿಕಾರ ಮತ್ತು ಭೂಮಿಯ ಹಕ್ಕು ನಿರಾಕರಿಸಲ್ಪಡುತ್ತಿತ್ತು. ನಮ್ಮ ಪೂರ್ವಜರ ಮೇಲಿನ ಅಮಾನವೀಯ ಶೋಷಣೆಯನ್ನು ಕಣ್ಣಾರೆ ಕಂಡಿದ್ದ ಮತ್ತು ಸ್ವತಃ ಅನುಭವಿಸಿದ್ದ ಅಂಬೇಡ್ಕರ್ ರವರು ಇದನ್ನು ಮುಂದುವರಿಯುವಂತಾಗಬಾರದು ಎಂಬ ಕಾರಣಕ್ಕಾಗಿ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ಸಿದ್ದಾಂತದ ಸಂವಿಧಾನವನ್ನು ಜಾರಿಗೊಳಿಸುವ ಮೂಲಕ ದೇಶದ ಬಹುಸಂಖ್ಯಾತ ಶೋಷಿತ ವರ್ಗಕ್ಕೆ ನಿಜವಾದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟರು. ಕಳೆದ ಎಪ್ಪತ್ತು ವರ್ಷಗಳಲ್ಲಿ ಈ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳನ್ನು ರಕ್ಷಿಸಿಕೊಂಡು ಬಂದಿದೆ. ಆದರೆ ಇಂದು ಮನುವಾದಿಗಳ ಕೈ ಮೇಲಾಗಿದೆ. ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಎಲ್ಲವೂ ಅಪಾಯದಂಚಿನಲ್ಲಿದೆ. ಈ ಕುರಿತು ಪ್ರಜ್ಞಾವಂತ ಜನತೆ ಧ್ವನಿಯೆತ್ತಬೇಕಾಗಿದೆ. ಸಂವಿಧಾನದ ಆಶಯಗಳ ರಕ್ಷಣೆಗೆ ಮುಂದಾಗಬೇಕಿದೆ. ಯುವ ಜನತೆಗೆ ನೈಜತೆಯ ಅರಿವು ಮೂಡಿಸಬೇಕಾಗಿದೆ. ಇದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದು ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿಯವರು ಹೇಳಿದ್ದಾರೆ.
ಅವರು ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಹಾಗೂ ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂಧರ್ಭದಲ್ಲಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಪಿ. ದೇವಕಿ ಸಣ್ಣಯ್ಯ, ಹಿರಿಯ ಕಾಂಗ್ರೆಸ್ಸಿಗ ಸುಭಾಶ್ ಪೂಜಾರಿ, ಧರ್ಮಪ್ರಕಾಶ್, ಸಚಿನ್ ಕುಮಾರ್, ರಾಕೇಶ್ ಶೆಟ್ಟಿ, ಕೇಶವ ಭಟ್, ಅಬ್ದುಲ್ಲ ಕೋಡಿ, ಅಡಾಲ್ಫ್ ಡಿಕೋಸ್ಟಾ, ಜೋಸೆಫ್ ರೆಬೆಲ್ಲೋ ,ಸಂಗೀತ ಮುಂತಾದವರು ಉಪಸ್ಥಿತರಿದ್ದರು.