.JANANUDI.COM NETWORK
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಶ್ರೀ ಕೆ.ಎಸ್. ಈಶ್ವರಪ್ಪನವರು ಇತ್ತೀಚಿಗೆ. ತ್ರಿವರ್ಣ ಧ್ವಜದ ಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾರಿಸುವ ಹೇಳಿಕೆಯನ್ನು ಕೊಟ್ಟಿರುತ್ತಾರೆ. ಇದು ಅತ್ಯಂತ ಅಪಾಯಕಾರಿ ದೇಶದ್ರೋಹದ ಹೇಳಿಕೆಯಾಗಿದೆ.
ತ್ರಿವರ್ಣ ಧ್ವಜವು? ನಮ್ಮ ರಾಷ್ಟ್ರದ ಸ್ವಾತಂತ್ರ ಅಖಂಡತೆ, ಸಾರ್ವಭೌಮತೆ, ಅಸ್ಕಿತೆ ಮತ್ತು ಸಂವಿಧಾನಗಳ ಸಂಕೇತವಾಗಿದೆ. ಹಾಗಾಗಿ, ಶ್ರೀ ಈಶ್ವರಪ್ಪನವರ ‘ಹೇಳಿಕೆಯಿಂದ ನಮ್ಮ ದೇಶದ ಪ್ರಜೆಗಳಿಗೆ: ದಿಗ್ಫಮೆಯಾಗಿದೆ.. ಇದನ್ನು _ ವಿರೋಧಿಸಿ.ಶ್ರೀ ಈಶ್ವರಪ್ಪನವರನ್ನು ತಕ್ಷಣಷೇ ಸಚಿವ ಸಂಪುಟದಿಂದ ಕೈಬಿಟ್ಟು ಅವರ ವಿರುದ್ಧ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ ರಾಷ್ಟ್ರಧ್ವಜದ ಗೌರವವನ್ನು ಎತ್ತಿ ಹಿಡಿಯುವಂತೆ ಒತ್ತಾಯಿಸಿ ಕಾಂಗ್ರೆಸ್ ಸ ಶಾಸಕರು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
“ರಾಷ್ಟಾಭಿಮಾನಕ್ಕೆ ಜನ ದೇಶದ್ರೋಹದ ಹೇಳಿಕೆಗಳನ್ನು ಸಂವಿಧಾನದ ಆಶಯಗಳಿಗೆ ಧಕ್ಕೆಯಾಗುವ ವಿಚಾರಗಳನ್ನು ಮತ್ತು ರಾಷ್ಟ್ರ ಲಾಂಛನಗಳಿಗೆ ಅಪಮಾನವನ್ನು ಸಹಿಸಲಾಗುವುದಿಲ್ಲ, ಇಂತಹ ಘಟನೆಗಳೊಂದಿಗೆ ರಾಜಿ ಮಾಡಿಕೊಳ್ಳುವೆ ವಿಷಯವೇ ಇರುವುದಿಲ್ಲ. ಹೀಗಿರುವಾಗ, ರಾಷ್ಟ್ರದ್ಧಜಕ್ಕೆ ಅಪಮಾನ ಮಾಡಿದ ವ್ಯಕ್ತಿಯೊಬ್ಬ ರಾಜ್ಯದ ಸಚಿವನಾಗಿರುವುದನ್ನು ಕಲ್ಪಿಸಲೂ ಸಾಧ್ಯವಿಲ್ಲ. ಶ್ರೀ ಈಶ್ವರಪ್ಪನವರ ಹೇಳಿಕೆಯ ವಿರುದ್ಧ ಮತ್ತು ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿ ಅವರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸಬೇಕೆಂದು ಆಗ್ರಹಿಸಿ ನಾವು ಕುಂದಾಪುರ ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಿ ತಮಗೆ ಈ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ.
ಸಂವಿಧಾನದ ರಕ್ಷಣೆಯ ಪವಿತ್ರವಾದ ಜವಾಬ್ಧಾರಿಯನ್ನು ಹೊಂದಿರುವ ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಸಂವಿಧಾನದತ್ತ ಅಧಿಕಾರವನ್ನು ಚರಾಯಿಸಿ! ತಕ್ಷಣವೇ ಶ್ರೀ. ಈಶ್ವರಪ್ಪನವರನ್ನು ಸಚಿವ್ ಸಂಪುಟದಿಂದ ವಜಾಗೊಳಿಸಿ ಆವರ ವಿರುದ್ಧ ಸೂಕ್ತ ಪ್ರಕರಣವನ್ನು ದಾಖಲಿಸುವಂತೆ ದಯವಿಟ್ಟು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿ ಸಂವಿಧಾನದ ಆಶಯಗಳನ್ನೆ ಎತ್ತಿ ಹಿಡಿಯಬೇಕೆಂದು ತಮ್ಮನ್ನು ವಿನಂತಿಸಿಕೊಳ್ಳುತ್ತಿತಿದೆ.
ಈ ರೀತಿಯಾಗಿ ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ನವರು ಮನವಿ ನೀ್ಡಿ, ಪ್ರತಿಯನ್ನು, ಜಿಲ್ಲಾಧಿಕಾರಿಗೆ ಹಾಗೂ ರಾಜ್ಯಪಾಲರಿಗೆ ನೀಡಲು ವಿನಂತಿಸಿದ್ದಾರೆ. ಮನವಿ ನೀಡುವಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಹಿರಿಯ ನಾಯಕ ಮಲ್ಯಾಡಿ ಶಿವರಾಮ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ, ಪುರಸಭಾ ಮಾಜಿ ಸದಸ್ಯ ಕೇಶವ ಭಟ್, ಮುಖಂಡರಾದ ಚಂದ್ರ ಅಮೀನ್, ಕೋಡಿ ಅಬ್ದುಲ್ಲಾ, ಅನಿಲ್ ಶೆಟ್ಟಿ, ಪಂಚಾಯತ್ ಸದಸ್ಯ ವಕ್ವಾಡಿ ರಮೇಶ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚೀತಾರ್ಥ ಶೆಟ್ಟಿ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಡಿ ಸುನಿಲ್ ಪೂಜಾರಿ, ಪುರಸಭಾ ಸದಸ್ಯ ಅಶ್ಫಕ್, ಉಡುಪಿ ಜಿಲ್ಲಾ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಅಧ್ಯಕ್ಷ ರಾಕೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.