ಕುಂದಾಪುರ : ಶಿಕ್ಷಣ ಕ್ರಾಂತಿಯ ಮಾತೆ ವಂದನೀಯ ಮದರ್ ವೆರೊನೀಕಾರ ದ್ವೀ ಶತಾಬ್ದಿ ಜನ್ಮ ದಿನಾಚರಣೆ


ಕುಂದಾಪುರ,ಅ,1: ಭಾರತದಲ್ಲಿ ಕಾರ್ಮೆಲ್ ಸಭೆಯ ಸ್ಥಾಪಕಿ ವಂದನೀಯ ಮದರ್ ವೆರೊನೀಕಾರ ಅ.1 ರಂದು ದ್ವೀ ಶತಾಬ್ದಿ ಜನ್ಮ ದಿನಾಚರಣೆಯನ್ನು ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಸಭೆಯ ಭಗಿನಿಯರು ಹೋಲಿ ರೋಜರಿ ಚರ್ಚಿನಲ್ಲಿ ಕ್ರತ್ಞತಾ ಪೂರ್ವಕ “ದೇವರೆ ನನ್ನ ಸರ್ವಸ್ವ” ಎಂಬ ಧ್ಯೇಯ ವಾಕ್ಯದೊಂದಿಗೆ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.
ಸಂತ ಜೋಸೆಪರಿಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಕಾರ್ಮೆಲ್ ಭಗಿನಿಯರ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಸುಪ್ರಿಯ ಪ್ರಸ್ತಾವನೇಯ ಮೂಲಕ ಮದರ್ ವೆರೊನೀಕಾರ ಮಹತ್ವವನ್ನು ತಿಳಿಸಿದರು. ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಪವಿತ್ರ ಬಲಿದಾನದ ನೇತ್ರತ್ವವನ್ನು ವಹಿಸಿ ಬಲಿದಾನ ಅರ್ಪಿಸಿ “ಕುಂದಾಪುರದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರಕದೆ ಇರುವ ಸಂಕಷ್ಟ ಕಾಲದಲ್ಲಿ ಕಾರ್ಮೆಲ್ ಸಭೆಯ ಭಗಿನಿಯರು, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿಯೇ ಶಿಕ್ಷಣ ಸಂಸ್ಥೆ ಆರಂಭಿಸಿ, ಹೆಣ್ಣಿಗೆ ಶಿಕ್ಷಣ ನೀಡಿ ಪೂರ್ಣ ಕುಟುಂಬಕ್ಕೆ ಶಿಕ್ಷಣ ದೊರಕುವಂತೆ ಮಾಡಿದ್ದಾರೆ, ಇವರ ಸೇವೆ ಇಂದಿಗೂ ಅಮೂಲ್ಯವಾದುದೆಂದು” ಶುಭ ಕೋರಿದರು.
ಕಟ್ಕೆರೆ ಬಾಲಾ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರು ವಂ|ಜೊಸ್ವಿ ಸಿದ್ದ ಕಟ್ಟೆ “ದೇವರ ವಾಕ್ಯವನ್ನು ಪಠಿಸಿ, ನಾವು ದೇವರ ವಾಕ್ಯವನ್ನು ಭಯದಿಂದ ಅಥವ ಒತ್ತಾಯದಿಂದ ಪಾಲಿಸುವುದಲ್ಲಾ, ಪ್ರೀತಿಯಿಂದ ಪಾಲಿಸಬೇಕು ಎಂದು ಹೇಳುತ್ತಾ, ಮದರ್ ವೆರೊನೀಕಾರ ಬಗ್ಗೆ ವಿವರಿಸಿ, ಅವರು ಆಂಗ್ಲಿಕನ್ ಕ್ರೈಸ್ತರಾಗಿದ್ದು, ಆಂಗ್ಲಿಕರ ಧರ್ಮ ಆಚರಣೆಯಲ್ಲಿ ಕೊರತೆ ಕಂಡು, ಅವರ ಸಹೋದರಿ ಜೊತೆ ಕಥೊಲಿಕ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ತಮ್ಮ ಜೀವನವನ್ನೇ ಯೇಸುವಿಗಾಗಿ ಮುಡುಪಿಟ್ಟು, ಪರಮ ಪ್ರಸಾದಕ್ಕೆ ಸಂಪೂರ್ಣ ಹ್ರದಯದಿಂದ ಪ್ರೀತಿಸಿ, ತಮ್ಮದೆ ಒಂದು ಧರ್ಮಸಭೆಯನ್ನು ಸ್ಥಾಪಿಸಿದರು. ಭಾರತದಲಿಯ್ಲೂ ತಮ್ಮ ಸಭೆ ಸ್ಥಾಪಿಸಿ ಭಗಿನಿಯರ ತರಬೇತಿ ಕೇಂದ್ರ ಮತ್ತು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ಜನರಿಗೆ ಶಿಕ್ಷಣ ದೊರಕುವಂತೆ ಮಾಡಿದ ಮಹಾ ಮಾತೆಯಾಗಿದ್ದಾರೆ’ ಎಂದು ತಿಳಿಸಿದರು. ಸಂತ ಜೋಸೆಫ್ ಕಾನ್ವೆಂಟಿಅನ್ ಕಾರ್ಮೆಲ್ ಸಭೆಯ ಭಗಿನಿಯರು ಮತ್ತು ಕಾರ್ಮೆಲ್ ಸಭೆಗೆ ಸಹಾಯ ಹಸ್ತ ನೀಡುವ ಬ್ಲೊಸಮ್ ಪಂಗಡದವರು ಬಲಿದಾನದ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಪಾಲನ ಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಹಾಜರಿದ್ದರು.