

ಕುಂದಾಪುರ, 12: ಭಂಡಾರ್ ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ, ಇಲ್ಲಿನ ಐಕ್ಯೂಎಸಿ, ಚುನಾವಣಾ ಸಾಕ್ಷರತ ಕ್ಲಬ್, ಯೂತ್ ರೆಡ್ ಕ್ರಾಸ್, ರಾಷ್ಟ್ರೀಯ ಸೇವಾ ಯೋಜನೆ,ಎನ್. ಸಿ. ಸಿ., ಮತ್ತು ಜಿಲ್ಲಾ ಸ್ವಿಪ್ ಸಮಿತಿಯ ಅವರ ಸಹಯೋಗದಲ್ಲಿ ಮತದಾರರ ಅರಿವು ಕಾರ್ಯಕ್ರಮ ನಡೆಯಿತು.
ಡಾ.ಸದಾನಂದ ಬೈಂದೂರು, ಎಸ್ ವಿಈಈಪಿ ತರಬೇತುದಾರರು, ಶಿಕ್ಷಕರು ಸರಕಾರಿ ಶಾಲೆ ಕುಂದಾಪುರ ಮತ್ತು ರಾಘವೇಂದ್ರ ಕಿಣಿ, ಎಲೆಕ್ಷನ್ ಸೆಕ್ಟರ್ ಆಫೀಸರ್, ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ಇವರು ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮತದಾನ ಮತ್ತು ಮತದಾರರ ಕುರಿತು ಅರಿವು ಮೂಡಿಸಿದರು.
ಡಾ. ಎನ್.ಪಿ ನಾರಾಯಣ್ ಶೆಟ್ಟಿ ಪದವಿ ಪ್ರಾಂಶುಪಾಲರು ಭಂಡಾರಕಾರ್ಸ್ ಕಾಲೇಜು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಶಶಿಕಾಂತ್ ಹಾತ್ವಾರ್ ಉಪನ್ಯಾಸಕರು ಭೌತಶಾಸ್ತ್ರ ವಿಭಾಗ ಮತ್ತು ಅರುಣ್ ಎ.ಎಸ್, ಎನ್ಎಸ್ಎಸ್ ಯೋಜನಾಧಿಕಾರಿ, ಉಪಸ್ಥಿತರಿದ್ದರು.
ಡಾ.ಶುಭಕರ ಆಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸ್ವಾಗತಸಿ,ಎನ್ ಎಸ್ ಎಸ್ ಯೋಜನಾಧಿಕಾರಿ ರಾಮಚಂದ್ರ ಆಚಾರ್ ನಿರೂಪಿಸಿ, ಮತ್ತು ರೆಡ್ ಕ್ರಾಸ್ ಯೋಜನಾಧಿಕಾರಿ ಸತ್ಯನಾರಾಯಣ ವಂದಿಸಿದರು.

