ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕರ್ಸ್ ಆರ್ಟ್ಸ್ & ಸಯನ್ಸ್ ಕಾಲೇಜು ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆಯನ್ನು ಜೂನ್ 14 ರಂದು ಕಾಲೇಜಿನ ಅರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ರೆಡ್ ಕ್ರಾಸ್ ಸಭಾಪತಿ ಎಸ್. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪ್ರಾಂಶುಪಾಲರಾದ ಡಾ. ಎನ್ ಪಿ. ನಾರಾಯಣ ಶೆಟ್ಟಿ ಉದ್ಘಾಟಿಸಿ ಭಾಷಣ ಮಾಡಿದರು. ಉಪ ಸಭಾಪತಿ ಡಾ. ಉಮೇಶ್ ಪುತ್ರನ್ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಕು. ವಿದ್ಯಾರಾಣಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ಸತ್ಯನಾರಾಯಣ ಶುಭ ಹಾರೈಸಿದರು. ಸಂಯೋಜಕರುಗಳಾದ – ವಿದ್ಯಾರಾಣಿ, ಸುಪ್ರೀತಾ, ಕಲಾವತಿ, ಯೋಗೀಶ್ ಶಾನುಬಾಗ್, ಶೇಖರ್ ಬಿ. ಮತ್ತು ಸತೀಶ್ ಸಾಲಿಯನ್ ಹಾಗೂ 21 ರಕ್ತ ದಾನಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಖಜಾಂಚಿ ಶಿವರಾಮ ಶೆಟ್ಟಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ವೆಲ್ ಪ್ಹೇರ್ ಆಫೀಸರ್ ಢಾ ಶುಭಕರ್ ಆಚಾರ್ಯ, ರೆಡ್ ಕ್ರಾಸ್ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಆಚಾರ್ಯ, ಎ. ಮುತ್ತಯ್ಯ ಶೆಟ್ಟಿ, ಮತ್ತು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಸೋನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಮತ್ತು ಎಲ್ಲಾ ಆಹ್ವಾನಿತರಿಗೆ ಉಪಹಾರ ನೀಡುವ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.