JANANUDI.COM NETWORK

ಕುಂದಾಪುರ, ಮೆ.8: ಕಳೆದ ಮೂರು ವರ್ಷಗಳಿಂದ ಕುಂದಾಪುರ ರೋಜರಿ ಚರ್ಚಿನಲ್ಲಿ ಸೇವೆ ನೀಡುತಿದ್ದ ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ ಇವರಿಗೆ ಬಸ್ರೂರು ಚರ್ಚಿಗೆ ವರ್ಗಾವಣೆಗೊಂಡ ಪ್ರಯುಕ್ತ ಕುಂದಾಪುರ ರೋಜರಿ ಚರ್ಚಿನಲ್ಲಿ ಬಿಳ್ಕೋಡುಗೆ ಸಮಾರಂಭ ನಡೆಯಿತು.
ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ ಇವರು ನೀಡಿದ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಾಲನ ಮಂಡಳಿಯ ಉಪಾಧ್ಯಕ್ಷ ತಮ್ಮ ಆನ್ನಿಸಿಕೆಯನ್ನು ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿದ ಸಹಾಯಕ ಧರ್ಮಗುರು ವಂ|ವಿಜಯ್ ದಿಸೋಜಾ “ಈ ಚರ್ಚಿನಲ್ಲಿ ನಿಸ್ವಾರ್ಥದಿಂದ ಸೇವೆ ಮಾಡಿದ ತ್ರಪ್ತಿ ನನಗಿದೆ, ಪ್ರಧಾನ ಧರ್ಮಗುರುಗಳು ನನ್ನನ್ನು ತುಂಬ ಆಧಾರಿಸಿದ್ದಾರೆ, ಅವರ ಮಾರ್ಗದರ್ಶನದಿಂದ ಚೆನ್ನಾಗಿ ಸೇವೆ ಮಾಡಲು ಸಾಧ್ಯವಾಯಿತು, ನನ್ನನ್ನು ಆಧರಿಸಿದ ಸಹಕರಿಸಿದ ಚರ್ಚಿನ ಭಕ್ತರಿಗೆ, ಪಾಲನ ಮಂಡಳಿಗೆ ಸಂಘ ಸಂಸ್ಥೆಯವರಿಗೆ ಧನ್ಯವಾದಗಳನ್ನು ಅರ್ಪಿಸಿ, ಇಲ್ಲಿ ನನಗೆ ಮಕ್ಕಳೊಡನೆ ಒಡನಾಟ ತಪ್ಪಿದೆಯೆಂದು ಪಶ್ಚಾತಾಪ ಪಟ್ಟರು, ಆದರೆ ಯೇಸುವಿನ ಹೆಸರಲ್ಲಿ ಸೇವೆ ನೀಡಲು ಬೇರೆ ಕಡೆ ಹೊಗಲೇ ಬೇಕಿದ್ದು, ಬಸ್ರೂರಿನ ಇಗರ್ಜಿಯ ಶಿಕ್ಷಣ ಸಂಸ್ಥೆಯನ್ನು ಉನ್ನತಿಕರಣ ಗೊಳಿಸಬೆಕೆಂದು ಧರ್ಮಾಧ್ಯಕ್ಷರು ನನಗೆ ತಿಳಿಸಿದ್ದಾರೆ, ಅದರಂತೆ ನಡೆದುಕೊಳ್ಳುತ್ತೇನೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ ಕಟ್ಕೆರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ಧರ್ಮಗುರು ವಂ| ಆಲ್ವಿನ್ ಸಿಕ್ವೇರಾ ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು. ವಿಲ್ಸನ್ ಒಲಿವೆರಾ ಕಾರ್ಯಕ್ರಮ ನಿರೂಪಿಸಿದರು.
















