

ಕುಂದಾಪುರ : ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಸರಕಾರಿ ಪ್ರೌಢಶಾಲೆ ಬಸ್ರೂರು ಇವರ ಜಂಟಿ ಸಹಭಾಗಿತ್ವದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ ಕುಮಾರಿ ರಿಧಾ ಫರ್ವಿನ್ ಪ್ರಥಮ ಸ್ಥಾನ (ಪ್ರೌಢಶಾಲೆ ವಿಭಾಗ) ಹಾಗೂ ಕುಮಾರ ಕಿಶನ್ ಶೆಟ್ಟಿ ಮತ್ತು ಕುಮಾರ ತನ್ಮಯ್ ತೃತೀಯ ಸ್ಥಾನ ಪಡೆದಿರುತ್ತಾರೆ ಕುಮಾರಿ ರಿಧಾ ಫರ್ವಿನ್ ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ
ಕರಾಟೆ ಶಿಕ್ಷಕಿ ಕುಮಾರಿ ಮೇಘನಾ ತರಭೇತಿಯನ್ನು ನೀಡಿರುತ್ತಾರೆ. ಇವರಿಗೆ ಸಂಸ್ಥೆಯ ಆಡಳಿತಾಧಿಕಾರಿಗಳು ಮುಖ್ಯಶಿಕ್ಷಕರು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಶುಭ ಕೋರಿರುತ್ತಾರೆ.


