

ಉಡುಪಿಯಿಂದ ದಾವಣಗೆರೆಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಂದ್ರು (24) ಅವರು ಜನ್ಸಾಲೆ ಬಳಿ ಬಂದಾಗ ಅವರಿಗೆ ಜೋರಾಗಿ ನಡುಕ ಪ್ರಾರಂಭಗೊಂಡಿತು ನಂತರ ಸಿದ್ದಾಪುರದಲ್ಲಿ ಬಸ್ಸನ್ನು ನಿಲ್ಲಿಸಿದ ಚಾಲಕ 108ಕ್ಕೆ ವಾಹನದ ಮೂಲಕ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಲ್ಲಿ ಪರೀಕ್ಷಿಸಿದ ವೈದ್ಯರು ಯುವಕ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ನಿರ್ವಾಹಕ ಪರಪ್ಪ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ