

ಕುಂದಾಪುರ: ಕುಂದಾಪುರ ಸಮೀಪದ ಹಂಗಳೂರಿನ ಖಾಸಗಿ ಬಸ್ ವರ್ಕ್ ಶಾಪ್ ವೊಂದರಲ್ಲಿ ಡ್ರೈವರ್ ಇಲ್ಲದಾಗ ಬಸ್ಸೊಂದು ಚಲಿಸಿ ಹೆದ್ದಾರಿಗೆ ಪ್ರವೇಶಿಸಿ, ಡಿವೈಡರನ್ನು ದಾಟಿ ಇನ್ನೊಂದು ಮಗ್ಗಲನಿಕಲ್ಲಿರು ರಸ್ತೆಯನ್ನು ಕ್ರಮಿಸಿ ಕಾಂಪ್ಲೆಕ್ಸ್ ಎದುರುಕಡೆ ಪಾರ್ಕ್ ಆಗಿದ್ದ ಕಾರೊಂದಕ್ಕೆ ಢಿಕ್ಕಿಹೊಡೆದ ಘಟನೆ ಸೋಮವಾರ(ಜ13) ಬೆಳಗ್ಗೆ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಕಾರು ಮತ್ತು ಬಸ್ ನ ಮುಂಭಾಗ ಜಖಂಗೊಂಡಿದೆ, ಕಾರಿಗೆ ಬಸ್ಸ್ ಡಿಕ್ಕಿ ಹೊಡೆದರಿಂದ ಕಾರು ಕಾಂಪ್ಲೆಕ್ಸ್ ಕಟ್ಟಡದ ಭಾಗಕ್ಕೆ ತಾಗಿ ಕಾರಿನ ಹಿಂದೆ ಮತ್ತು ಮುಂದೆ ಜಖಂ ಗೊಂಡಿದೆ. ಬೆಳಿಗ್ಗೆ ಉದುಬತ್ತಿ ಹೊತ್ತಿಸಿದ್ದು ಪ್ರಯಾಣಕ್ಕೆ ಸಿದ್ದತೆ ಮಾಡಿದಂತೆ ತೋರುತ್ತದೆ.
ಅಜಾಗ್ರತೆಯಿಂದ ಆದ ಘಟನೆ ನಿಜಕ್ಕೂ ಅಘಾತಕಾರಿಯಾಗಿದ್ದು, ಬೆಳಗಿ ಸಮಯ ಆದರಿಂದ ಹೆಚ್ಚಿನ ತೊಂದರೆ ಆಗಲಿಲ್ಲ., ಈ ಘಟನೆ ಜನರಲ್ಲಿ ಅಚ್ಚರಿಯನ್ನೂ ಮೂಡಿದ್ದು, ಇದರ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
