PHOTOS, REPORT; DOMINIC BRAGANZA EDITOR : BERNARD DCOSTA
ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 454ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.
ತಾರೀಖಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಕುಂದಾಪುರ ಹೋಲಿ ರೊಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಅರ್ಪಿಸಿ ‘ರೊಜರಿ ಮಾತೆಯ ಜಪ ಪ್ರಾರ್ಥನೆಯಲ್ಲಿ ಒಂದು ಅತ್ಯುತ್ತಮ ಪ್ರಾರ್ಥನೆ, ಕುಟುಂಬ ಸಮೇತ, ಪ್ರೀತಿಯಿಂದ ಮಾಡಬೇಕು, ಈ ರೊಜರಿ ಮಾತೆ ಕಶ್ಟದಲ್ಲಿ ಇರುವರಿಗೆ, ಅಪಾಯದಲ್ಲಿ ಇರುವರಿಗೆ, ಹಿಂಸೆಗೆ ಒಳಪಟ್ಟ ಕ್ರೈಸ್ತರಿಗೆ ಅನುಗ್ರಹ ತೋರಿದ್ದಾಳೆ, ಅವಳ ಜಪಮಾಲೆಯಲ್ಲಿ ಅಘಾದ ಶಕ್ತಿ ಇದೆ. ೪೦೦ ವರ್ಷಕ್ಕೂ ಹೆಚ್ಚುಕಾಲಾ ನಮ್ಮನ್ನು ಸಾಕಿ ಸಲಹಿದ್ದಾಳೆ. ನಾವು ಅವಳಲ್ಲಿ ಸದಾ ಭಕ್ತಿ ಇಡೋಣ. ಮೇರಿ ಮಾತೆಯು ನಮ್ಮ ಯಾವ ಕೋರಿಕೆಯನ್ನು ನಿರಾಕರಿಸುವುದಿಲ್ಲ, ಅದಕ್ಕಾಗಿ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಅವಳು ಯೇಸುವಿನ ಮೂಲಕ ನಿಮ್ಮ ಪ್ರಾರ್ಥನೆಯನ್ನು ನೇರವೇರಿಸುತ್ತಾಳೆ’ ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಎಂದು ಸಂದೇಶ ನೀಡಿದರು.
ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಮತ್ತು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.