

ಸುಮಾರು 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅಪೂರ್ವ ಪರಿಶುದ್ಧ ಭಾಷಾ ಸಂಪತ್ತು ಹಾಗೂ ಸಾಂಸ್ಕೃತಿಕ ಸಂಪತ್ತು ಹೊಂದಿರುವ ಕುಂದಾಪ್ರ ಕನ್ನಡದ ಸಮಗ್ರ ಸಂಶೋಧನೆ ಅಭಿವೃದ್ಧಿ ದೃಷ್ಠಿಯಿಂದ ಅಗಸ್ಟ್ 4 ರಂದು ವಿಚಾರ ವಿನಿಮಯ ಸಭೆಯೊಂದನ್ನು ಕರೆಯಲಾಗಿದೆ.
ಬಂಟರ ಯಾನೆ ನಾಡವರ ಸಂಘದ ಗಿಳಿಯಾರು ಕುಶಲ ಹೆಗ್ಡೆ ಸಭಾ ಭವನದಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಬೆಳಿಗ್ಗೆ 10:30ಕ್ಕೆ ಸಭೆ ಏರ್ಪಡಿಸಲಾಗಿದೆ.
ಕುಂದಕನ್ನಡ ಅಭಿಮಾನಿ, ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಗತ್ಯವಾಗಿ ಭಾಗವಹಿಸಿ, ವಿಚಾರ ವಿನಿಮಯದಲ್ಲಿ ಪಾಲ್ಗೊಳ್ಳಬೇಕೆಂದು ಬಂಟರ ಯಾನೆ ನಾಡವರ ಸಂಘದ ಕುಂದಾಪುರ ತಾಲೂಕು ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ ಆಹ್ವಾನಿಸಿದ್ದಾರೆ.