JANANUDI.COM NETWORK
ಕುಂದಾಪುರ,ಮೇ.5; ಕುಂದಾಪುರ ಪುರಸಭೆ ವ್ಯಾಪ್ತಿಯ ಚಿಕ್ಕನಸಾಲ್ ಕಾಂಕ್ರಿಂಟ್ ರಸ್ತೆಂiÀ ಬದಿಯಲ್ಲಿ ಜಲಸಿರಿ ಕುಡಿಯುವ ನೀರಿನ ಯೋಜನೆಗಾಗಿ ಸುಮಾರು 12 ಇಂಚು ಗಾತ್ರದ ಕಬ್ಬಿಣದ ಪೈಪುಗಳನ್ನು ಮಣ್ಭಿನ ಅಡಿಯಲ್ಲಿ ಅಳವಡಿಸುವ ಕಾಮಗಾರಿ ಮೇ 4ರಂದು ಆರಂಭಗೊಂಡಿದೆ.
ಆದರಿಂದ ಚಿಕ್ಕನಸಾಲು ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂದಿಸಲಾಗಿದೆ. ಜನರು ಬೇರೆ ರಸ್ತೆಗಳಿಂದ ಸಂಚರಿಸಿ ಸಹಕರಿಸಬೇಕೆಂದು ಪುರಸಭೆ ವಿನಂತಿಸಿಕೊಂಡಿದೆ. ಈ ಕಾಮಾಗಾರಿ ಸುಮಾರು ಹತ್ತು ದಿನಗಳ ತನಕ ನಡೆಯಬಹುದೆಂದು ತಿಳಿದು ಬಂದಿದೆ.