

KSCST 2022-23 ನೇ ಸಾಲಿಗೆ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜು ಕುಂದಾಪುರ ಇದರ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಮೂರು ಪ್ರಾಜೆಕ್ಟ್ ಪ್ರಸ್ತಾವನೆಗಳು ಅನುದಾನವನ್ನು ಪಡೆದಿವೆ.
ಎಲೆಕ್ಟ್ರಾನಿಕ್ಸ್ ವಿಭಾಗದ ಸುಮನ್ ಕಾನ್ ಆರ್ ಬಾಗೇವಾಡಿ, ಪ್ರಥಮ ರಾಜೇಶ್ ರಾಯ್ಕರ್, ವೀರೇಂದ್ರ ಪಿ ಗೌಡರ್, ರಘು ಬಿ ನಾಯ್ಕರ್ “ಐಒಟಿ ಬಳಸಿ ಟ್ರಾನ್ಸ್‌ಫಾರ್ಮರ್ ಹೆಲ್ತ್ ಮಾನಿಟರಿಂಗ್ ಸಿಸ್ಟಮ್” ಎಂಬ ತಮ್ಮ ಯೋಜನೆಯ ಪ್ರಸ್ತಾವನೆಗೆ ಅನುದಾನವನ್ನು ಪಡೆದರು. ಈ ಯೋಜನೆಗೆ ಪ್ರೊ.ವರುಣ ಕುಮಾರ, ಪ್ರೊ.ಅಕ್ಷತಾ ನಾಯಕ್ ಮಾರ್ಗದರ್ಶಕರಾಗಿದ್ದರು.ಅಮರ್ ಸಿ ಬಾಲಗಾಂವ್, ಅನಿಲ್ ಎನ್ ಟಿ, ಚಂದನ್ ಕುಮಾರ್ ಸಿ ಎನ್, ವಿಷ್ಣುಮೂರ್ತಿ ನಾಯಕ್ ಅವರು ಪ್ರೊ ವರುಣ್ ಕುಮಾರ್ ಹಾಗೂ ಪ್ರೊ. ಅಕ್ಷತಾ ನಾಯಕ್ ಅವರ ಮಾರ್ಗದರ್ಶನದಲ್ಲಿ “ಕುಂದಾಪುರ ನಗರ ಪಾಲಿಕೆಗಳಲ್ಲಿ ದಕ್ಷ ಘನತ್ಯಾಜ್ಯ ನಿರ್ವಾಹಕರಿಗೆ ಸ್ವಯಂಚಾಲಿತ ಘನ ತ್ಯಾಜ್ಯ ವಿಂಗಡಣೆ ವ್ಯವಸ್ಥೆ” ಎಂಬ ಪ್ರಾಜೆಕ್ಟ್ ತಯಾರಿಸಿದ್ದು ಈ ಪ್ರಾಜೆಕ್ಟ್ ರಾಷ್ಟ್ರ ಮಟ್ಟದಲ್ಲಿ ನಡೆದ ಸ್ಪರ್ದೆಯಲ್ಲಿ ಉತ್ತಮ ಭವಿಷ್ಯದ ತಂತ್ರಜ್ಞಾನ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಪ್ರಜ್ವಲ್ ಸುರೇಂದ್ರ ನಾಯ್ಕ್, ಸುಷ್ಮಾ ಜಿ, ನವ್ಯಾ ಎಂ, ದೀಪಕ್ ಅವರು ಪ್ರೊ.ರಘುನಾಥ ಮತ್ತು ಪ್ರೊ.ವರುಣಕುಮಾರ ಅವರ ಮಾರ್ಗದರ್ಶನದಲ್ಲಿ ಮಣ್ಣಿನಲ್ಲಿರುವ ಸಾರಜನಕ, ರಂಜಕ, ಹಾಗೂ ಪೊಟ್ಯಾಶಿಯಮ್ ಒಟ್ಟಿಗೆ ನೀರಿನ ಪ್ರಮಾಣವನ್ನು ಸೆನ್ಸಾರ್ ಉಪಯೋಗಿಸಿ ಪತ್ತೆ ಹಚ್ಚುವುದು ಮತ್ತು ಸಸ್ಯಗಳ ರೋಗವನ್ನು ಸಿಎನ್ ಎನ್ ಹಾಗೂ ಯುಐ ಪಾತ್ ಸಹಾಯದಿಂದ ಪತ್ತೆಹಚ್ಚುವ ಪ್ರಾಜೆಕ್ಟ್ ಅನ್ನು ತಯಾರಿಸಿದ್ದು ಕ್ಯೂತ್ರೀ ಜರ್ನಲ್ಸ್ ಅಲ್ಲಿ ಇವರ ಪೇಪರ್ ಮುದ್ರಿತಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ವಿಧ್ಯಾರ್ಥಿಗಳ ಪರಿಶ್ರಮ ಹಾಗೂ ಯಶಸ್ಸಿಗೆ ಕಾಲೇಜಿನ ಅಧ್ಯಕ್ಷರಾದ ಶ್ರೀ ಸಿಧ್ದಾರ್ಥ ಜೆ ಶೆಟ್ಟಿ ಹಾಗೂ ಸಿಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.