

ಕೋಲಾರ:- ಎಸ್ಸೆಸ್ಸೆಲ್ಸಿ ಮಕ್ಕಳಲ್ಲಿನ ಪರೀಕ್ಷಾ ಗೊಂದಲ ನಿವಾರಣೆಗಾಗಿ ಮಾ.13 ರ ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೂ ನಗರದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಡಿವಿಜಿ ಸಭಾಂಗಣದಲ್ಲಿ `ಫೋನ್ ಇನ್ ಕಾಯಕ್ರಮ’ ಹಮ್ಮಿಕೊಳ್ಳಲಾಗಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಫೋನ್ ಇನ್ ಕಾರ್ಯಕ್ರಮದಲ್ಲಿ ತಮ್ಮೊಂದಿಗೆ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು, ವಿಷಯ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು ಭಾಷಾ ಮತ್ತು ಐಚ್ಚಿಕ ವಿಷಯಗಳಿಗೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಗೊಂದಲಗಳಿದ್ದರೆ ದೂರವಾಣಿ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಜಿಲ್ಲೆಯ ನುರಿತ ಸಂಪನ್ಮೂಲ ಶಿಕ್ಷಕರನ್ನು ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಆಯ್ಕೆ ಮಾಡಿಕೊಂಡಿದ್ದು, ಮಕ್ಕಳು ಶಾಲೆಯಿಂದಲೇ ದೂರವಾಣಿ ಕರೆ ಮಾಡಿ ವಿಷಯವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದುತಿಳಿಸಿದ್ದಾರೆ.
ಪರೀಕ್ಷಾ ಸಿದ್ದತೆ ಮತ್ತು ಪರೀಕ್ಷಾ ವಿಧಾನ ಮತ್ತಿತರ ಸಂದೇಹಗಳ ನಿವಾರಣೆಗೆ ಉಪನಿರ್ದೇಶಕರು-ದೂ.9448999345, ಶಿಕ್ಷಣಾಧಿಕಾರಿಗಳು ಹಾಗೂ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿಗಳು-ದೂ.7022087463, ವಿಷಯ ಪರಿವೀಕ್ಷಕರು-9964298845 ಹಾಗೂ 9449475260 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಗೊಂದಲಗಳನ್ನು ನಿವಾರಿಸಿಕೊಳ್ಳಲು ಕೋರಿದ್ದಾರೆ.
ವಿಷಯವಾರು ಸಂ.ವ್ಯಕ್ತಿಗಳು
ಪ್ರತಿ ವಿಷಯಕ್ಕೂ ಸಂಪನ್ಮೂಲ ವ್ಯಕ್ತಿಗಳಿದ್ದು, ಅವರು ಮಕ್ಕಳ ವಿಷಯವಾರು ಗೊಂದಲಗಳಿಗೆ ಪರಿಹಾರ ನೀಡಲಿದ್ದಾರೆ. ಅದರಂತೆ ಪ್ರಥಮ ಭಾಷೆ ಕನ್ನಡಕ್ಕೆ-ಬಿ.ಕೆ.ನಾಗರಾಜ್ ದೂ.9900399627, ರಾಜಣ್ಣ-8660314436, ದ್ವಿತೀಯ ಭಾಷೆ ಇಂಗ್ಲೀಷ್ಗೆ- ಬಿ.ಎ.ಕವಿತಾ-9481586717, ರಮಾ-9481587474 ಹಾಗೂ ತೃತೀಯ ಭಾಷೆ ಹಿಂದಿ ವಿಷಯಕ್ಕೆ ಕೃಷ್ಣಮೂರ್ತಿ ದೂ.6363613866, ಪ್ರಭಾ ದೂ. 9844440916 ಸಂಖ್ಯೆಗಳಿಗೆ ಕರೆ ಮಾಡಿ ಗೊಂದಲ ಪರಿಹರಿಸಿಕೊಳ್ಳಬಹುದು.
ಗಣಿತ ವಿಷಯಕ್ಕೆ ಬಸವರಾಜ್-9449722344,. ಶ್ರೀನಿವಾಸಗೌಡ ದೂ. 9741540051, ವಿಜ್ಞಾನ ವಿಷಯಕ್ಕೆ ಸಂಪನ್ಮೂಲ ಶಿಕ್ಷಕರಾದ ನರಸಿಂಹ ಪ್ರಸಾದ್-ದೂ 9164395811, ಅಮರೇಶಬಾಬು-9448664593ರಲ್ಲಿ ಸಂಪರ್ಕಿಸಬಹುದು. ಸಮಾಜ ವಿಜ್ಞಾನ ವಿಷಯಕ್ಕೆ ಎಸ್.ಭಾಗ್ಯ-ದೂ. 8197314709,ಗಂಗಾಧರಮೂರ್ತಿ- ದೂ 7019618766, ರಾಜರೆಡ್ಡಿ-ದೂ.9972303788 ರವರನ್ನು ಸಂಪರ್ಕಿಸಲು ಕೋರಲಾಗಿದೆ. ಉಳಿದಂತೆ ಉರ್ದು ವಿಷಯಕ್ಕೆ ವಜಿಹ್ ಸುಲ್ತಾನ- ದೂ.9480437827, ಫರೀದಾ ಬೇಗಂ-ದೂ. 9449990199 ರವರನ್ನು ಸಂಪರ್ಕಿಸಿ ಮಕ್ಕಳು ಗೊಂದಲ ನಿವಾರಿಸಿಕೊಳ್ಳಲು ಕೋರಿದ್ದಾರೆ.
ಶಾಲಾ ಅವಧಿಯಲ್ಲೇ ಈ ಫೋನ್ ಇನ್ ಕಾರ್ಯಕ್ರಮ ನಡೆಯುತ್ತಿರುವುದರಿಂದ ಎಲ್ಲಾ ಶಾಲೆಗಳ ಶಿಕ್ಷಕರು ಮಕ್ಕಳ ಗೊಂದಲಗಳಿಗೆ ಪರಿಹಾರ ಸಿಗುವಂತಾಗಲು ದೂರವಾಣಿ ಕರೆ ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಸೂಚಿಸಿರುವ ಡಿಡಿಪಿಐ ಅವರು, ಪೋಷಕರು ಸಹಾ ದೂರವಾಣಿ ಕರೆ ಮಾಡಿ ಪರೀಕ್ಷಾ ಗೊಂದಲಗಳಿದ್ದರೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದ್ದಾರೆ.