
ಕುಂದಾಪುರ, ಸ್ಥಳೀಯಾಡಳಿತಕ್ಕೆ ಶಕ್ತಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಸ್ಥಳೀಯಾಡಳಿತದ ಮೂರು ಸ್ಥರಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಮಂಜುನಾಥ ಭಂಡಾರಿ ಕರೆ ನೀಡಿದರು .
ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು .
ಸಭೆಯ ಅಧ್ಯಕ್ಷತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು .
ಸಭೆಯಲ್ಲಿ ಮಾಜಿ ಸಚಿವರಾದ ಕೆ. ಜಯ ಪ್ರಕಾಶ ಹೆಗ್ಡೆ , ವಿನಯ ಕುಮಾರ ಸೊರಕೆ , ಅಭ್ಯರ್ಥಿ ರಾಜು ಪೂಜಾರಿ , ಕೆಪಿಸಿಸಿ ಉಸ್ತುವಾರಿ ಮಿಥುನ್ ರೈ,ಎಂ . ಎಸ್ . ಮಹಮದ್ , ಕಿಶನ್ ಹೆಗ್ಡೆ ಎಂ. ದಿನೇಶ್ ಹೆಗ್ಡೆ , ಮಲ್ಯಾಡಿ ಶಿವರಾಮ ಶೆಟ್ಟಿ ,ಬಿ ಹಿರಿಯಣ್ಣ , ದೇವಾನಂದ ಶೆಟ್ಟಿ ,ಪ್ರಸನ್ನ ಶೆಟ್ಟಿ ಕೆರಾಡಿ, ವಿಕಾಸ ಹೆಗ್ಡೆ , ರೇಖಾ ಪೂಜಾರಿ, ದೇವಕಿ ಸಣ್ಣಯ್ಯ , ಕ್ರಷ್ಣದೇವ ಕಾರಂತ , ರಮಾನಂದ ಶೆಟ್ಟಿ , ಅಶೋಕ ಪೂಜಾರಿ ಬೀಜಾಡಿ , ರೋಶನ್ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು .
ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಶಂಕರ್ ಕುಂದರ್ ವಂದಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.




