ಜಗತ್ತಿಗೆ ಮತ್ತೆ ಭೀತಿ ಹುಟ್ಟಿಸಿದ ಕೋವಿಡ್ ಹೊಸ ರೂಪಾಂತರಿ “ಓಮಿಕ್ರಾನ್” ಬಗ್ಗೆ ಸ್ವಲ್ಪ ಮಾಹಿತಿ

JANANUDI.COM NETWORK


ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಓಮಿಕ್ರಾನ್ ವೈರಸ್ ವಿಶ್ವದಾದ್ಯಂತ ಮತ್ತೆ ಭೀತಿಯನ್ನು ಸೃಷ್ಟಿಸಿದೆ. ಈ ರೂಪಾಂತರವನ್ನು ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಲಾಗಿದೆ. ಅದರಂತೆ ಓಮಿಕ್ರಾನ್ ಸೋಂಕು ನವೆಂಬರ್ 9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢೀಕರಿಸಲ್ಪಟ್ಟಿದೆ.
ಹಾಂಕಾಂಗ್ ಮತ್ತು ಬೆಲ್ಜಿಯಂನಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿದ್ದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದವರ ಬಗ್ಗೆ ಭಾರತದಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಇಬ್ಬರಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಹೊಸ ತಳಿಯ ಓಮಿಕ್ರಾನ್ ಪರಿಣಾಮಗಳು ಮತ್ತು ಅಪಾಯದ ಬಗ್ಗೆ ಅಧ್ಯಯನ ನಡೆಯುತ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಹಾಗೂ ಕೈಗಳನ್ನು ಆಗಾಗ ಸ್ವಚ್ಛಗೊಳಿಸುವಂತೆ ಮುಂಜಾಗ್ರತೆ ಕ್ರಮಗಳಿಗೆ ಸೂಚಿಸಲಾಗಿದೆ.
ಓಮಿಕ್ರಾನ್ ರೋಗಲಕ್ಷಣಗಳು
ಇತರ ಕೋವಿಡ್ ರೂಪಾಂತರಗಳಂತೆ ಕೆಮ್ಮು, ಶೀತ, ಜ್ವರ, ಗಂಟಲು ನೋವು, ತಲೆನೋವು ಇರುವುದು, ರುಚಿ ಮತ್ತು ವಾಸನೆಯ ನಷ್ಟ ಉಂಟಾಗುವುದು.
ಅಧಿಕ ದೇಹದ ಉಷ್ಣತೆ, ನಿರಂತರ ಕೆಮ್ಮು ಮತ್ತು ವಾಸನೆ ಅಥವಾ ರುಚಿಯ ನಷ್ಟ ಈ ರೂಪಾಂತರದಲ್ಲಿ ಹೆಚ್ಚು ಪ್ರಬಲವಾಗಬಹುದು.
ಸುಸ್ತು, ಗಂಟಲು ನೋವು, ತಲೆನೋವು, ಮೈಕೈ ನೋವು, ಅತಿಸಾರ, ಚರ್ಮದ ಮೇಲೆ ದದ್ದು, ಕಣ್ಣುಗಳು ಕೆಂಪಾಗಾಗುವುದು.
ಉಸಿರಾಟದಲ್ಲಿ ತೊಂದರೆ ತೊಂದರೆ ಉಂಟಾಗುವುದು
ನಡೆದಾಡಲು ಸಮಸ್ಯೆಯಾಗುವುದು
ಎದೆ ನೋವು ಸಮಸ್ಯೆ ಉದ್ಭವಿಸುತ್ತದೆ.
ಓಮಿಕ್ರಾನ್ ರೂಪಾಂತರವು ಇದುವರೆಗೆ ಪತ್ತೆಯಾಗಿರುವ ರೂಪಾಂತರಿಗಳಿಕಿಂತ ಹೆಚ್ಚು ಅಪಾಯಕಾರಿ ರೂಪಾಂತರಿ ಎಂದು ತಜ್ಞರು ತಿಳಿಸಿದ್ದಾರೆ.