ಯಲ್ದೂರು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೊರೋನ ಕಾರ್ಯಪಡೆಯಿಂದ ಪ್ರತಿ ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ:ಆನಂದ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ :- ತಾಲೂಕಿನ ಯಲ್ದೂರು  ಗ್ರಾಮ ಪಂಚಾಯತಿ ಮಟ್ಟದಲ್ಲಿ ರಚಿಸಿರುವ ಕೊರೋನ ಕಾರ್ಯಪಡೆಯನ್ನು  ಬಳಸಿಕೊಂಡು ಪ್ರತಿಯೊಂದು ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ ಮಾಡಲಾಗುವುದು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ತಿಳಿಸಿದರು.
  ಅವರು ಇಂದು ಯಲ್ದೂರು ಗ್ರಾಮ ಪಂಚಾಯ್ತಿಯಲ್ಲಿ ಹಮ್ಮಿಕೊಂಡಿದ್ದ ಕೊರೋನ ಟಾಸ್ಕ್ ಪೋರ್ಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ತಾಲ್ಲೂಕು ಆಡಳಿತದ ವತಿಯಿಂದ ಪ್ರತಿಯೊಂದು ಗ್ರಾಮದ ಪ್ರತಿಯೊಬ್ಬ ವ್ಯಕ್ತಿಗೂ ಕೋವಿಡ್ ಲಸಿಕೆಯನ್ನು ಹಾಕಿಸಲು ಕ್ರಿಯಾ ಯೋಜನೆಯನ್ನು ತಯಾರಿಸಿ ತಾಲ್ಲೂಕನ್ನು ಕೋವಿಡ್ ನಿಂದ ರಕ್ಷಿಸುತ್ತೇವೆ. ಕೊರೋನ ಸೋಂಕಿತರನ್ನು ರಕ್ಷಿಸಲು 600 ಬೆಡ್ ಗಳ ವ್ಯವಸ್ಥೆಯ 05 ಕೋವಿಡ್ ಕೇರ್ ಸೆಂಟರ್ ಗಳನ್ನು ಸುಸಜ್ಜಿತವಾಗಿ ಇಡಲಾಗಿದೆ ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ  ಟಿ. ಎ. ಶ್ರೀರಾಮಬಾಬು, ಜೆ. ಎಸ್. ವಾಣಿ, ಸಹಾಯಕ ನಿರ್ದೇಶಕ  ರಾಮಪ್ಪ, ಪಿಡಿಒ ಸಿ. ಎಲ್. ಚಿನ್ನಪ್ಪ, ವೈದ್ಯಾಧಿಕಾರಿಗಳಾದ ಅಬ್ರಾರ್ ಪಾಷ, ಬೇಬಿ ಶಾಮಿಲಿ, ಪೋಲೀಸ್ ಇಲಾಖೆಯ ಮಂಜುನಾಥ ರೆಡ್ಡಿ,  ಬಿಎಲ್ಒಗಳಾದ ಆರ್. ಅಂಬರೀಶ್, ಎಲ್. ರಾಮಚಂದ್ರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.