ಕೋವಿಡ್ ಸೋಂಕಿತ ಮಹಿಳೆಯನ್ನು ಅನಾಥೆಯಾಗಿ ರೈಲ್ವೆ ದ್ವಾರಲ್ಲಿ ಬಿಟ್ಟು ಹೋದರು, ಒರ್ವ ವಕೀಲರಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ್ದಾರೆ

JANANUDI.COM NET WORK


[ಇಕೆಯ ಕುಟುಂಬದವರು ಅವಳನ್ನು ನಡೆದುಕೊಂಡ್ಡದ್ದು, ಅಮಾನವೀಯ ಕ್ರತ್ಯ ರೈಲ್ವೆ ಇಲಾಖೆಗೆ (ಗಾರ್ಡ್ಸ್ ಮತ್ತು ಇತರರಿಗೆ) ತಿಳಿಯದಿದ್ದದ್ದು ವಿಚಿತ್ರವಾಗಿಯೇ ಇದೇ, ನಮ್ಮ ರೈಲ್ವೆ ನಿಲ್ದಾಣಗಳಲ್ಲಿ ಇಷ್ಟೊಂದು ಅಲ್ಪಸುರಕ್ಷತೆಯೇ..!? ಇದರಿಂದಾಗಿ ಕೋವಿಡ್ ಹರಡುವ ಸಾಧ್ಯತೆ ಇಲ್ಲವೇ?]

ಬೆಂಗಳೂರು: ಕೋವಿಡ್ ಸೋಂಕಿತ ಮಹಿಳೆಯನ್ನು ರೈಲ್ವೇ ನಿಲ್ದಾಣದಲ್ಲಿ ಬಿಟ್ಟು ಹೋಗಿರುವ ಹ್ರದಯ ವಿದ್ರಾವಕ ಬೆಂಗಳೂರಿನಲ್ಲಿ ನಡೆದ ಘಟನೆ ವರದಿಯಾಗಿದೆ, ಸಂತ್ರಸ್ಥ ಮಹಿಳೆಯು, ವಕೀಲರೊಬ್ಬರ ಸಮಯ ಪ್ರಜ್ಞೆಯಿಂದ ಆಸ್ಪತ್ರೆ ಸೇರುವಂತಾಗಿದೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ಸಂತ್ರಸ್ಥ ಮಹಿಳೆಯು ಮೂರು ದಿನಗಳಿಂದ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ಅದೇ ದಾರಿಯಲ್ಲಿ ನಿತ್ಯ ಓಡಾಡುತ್ತಿರುವ ವಕೀಲರಾದ ಎಂ.ಶ್ರೀಧರನ್ ಇವಳನ್ನು ಗಮನಿಸಿ,ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದು ಆಸ್ಪತ್ರೆಗೆ ದಾಖಲಿಸುವಂತೆ ಮಾಡಿದ್ದಾರೆ.
ಮಹಿಳೆ ಸುಮಾರು 30 ವರ್ಷ ವಯಸ್ಸಿನವಳಾಗಿದ್ದು, ಇಕೆಯನ್ನು ಶ್ರೀಧರನ್ ಮೂರನೆದಿನವೂ ಕಂಡು ಆಕೆಯನ್ನು ಪ್ರಶ್ನಿಸಿದಾಗ, ಆಕೆಯ ಹೀನಾಯ ಪರಿಸ್ಥಿತಿ ನಾನು ಕೋವಿಡ್ ಸೋಂಕಿತೆ ನನ್ನವರು ನನಗೆ ಇಲ್ಲಿ ಬಿಟ್ಟು ಹೋಗಿದ್ದಾರೆ’ ಅವರಿಗೆ ತಿಳಿಸಿದ್ದಾರೆ. ಕೂಡಲೇ ಇಂಟರ್ ನೆಟ್ ನಲ್ಲಿ ರೈಲ್ವೇ ಅಧಿಕಾರಿಗಳ ಮೊಬೈಲ್ ಸಂಖ್ಯೆ ಪಡೆದ ಶ್ರೀಧರನ್ ಅವರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಪ್ರತಿಕ್ರಿಯಿಸಿದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಆಕೆಯನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ವಕೀಲ ಶ್ರೀಧರನ್ ಅವರು, ‘ರೈಲ್ವೆ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುವ ನನ್ನ ತಂಗಿಯನ್ನು ಪ್ರತಿದಿನ ಸಂಜೆ 5 ಗಂಟೆ ಸುಮಾರಿಗೆ ಕರೆದುಕೊಂಡು ಹೋಗಲು ನಾನು ಈ ಮಾರ್ಗದಲ್ಲಿ ಬರುತ್ತಿದ್ದೆ. ಒಬ್ಬ ಮಹಿಳೆಯು ಎರಡು ದಿನಗಳ ಕಾಲ ಮಳೆ ಸುರಿಯುತ್ತಿದ್ದರೂ ರೈಲ್ವೇ ಪ್ರವೇಶ ದ್ವಾರದಲ್ಲಿರುವುದನ್ನು, ಇನ್ನೊಂದು ದಿನ ಆಕೆಯ ಸುತ್ತ ನೊಣಗಳು ಮುಸುರಿದ್ದನ್ನು ನೋಡಿ ಇದನ್ನು ರೈಲ್ವೆ ಇಲಾಖೆಗೆ ತಿಳಿಸಿದ್ದೆ’ ಎಂದು ಹೇಳುತ್ತಾರೆ. ಅವಳು ಹಿಂದಿ ಮಾತನಾಡುವುಳಾಗಿದ್ದಳು ಎಂದು ತಿಳಿದು ಬಂದಿದೆ.
ಇಕೆಯ ಕುಟುಂಬದವರು ಅವಳನ್ನು ನಡೆದುಕೊಂಡ್ಡದ್ದು, ಅಮಾನವೀಯ ಕ್ರತ್ಯ, ಅವರು ಮನುಷ್ಯರಲ್ಲ, ಮಾನವ ರೂಪದ ರಾಕ್ಷಸರು ಎಂದು ಸಾಬೀತು ಆಗುತ್ತದೆ. ಆದರೆ ಇಷ್ಟಾಗಿಯೂ, ಮೂರು ದಿವಸಗಳಿಂದ ಇವಳು ದೇಶ ಇಂದು ಅಪಾಯದ ಸ್ಥಿತಿಯಲ್ಲಿ ಇರುವಾಗ ರೈಲ್ವೆ ಇಲಾಖೆಗೆ (ಗಾರ್ಡ್ಸ್ ಮತ್ತು ಇತರರಿಗೆ) ತಿಳಿಯದಿದ್ದದ್ದು ವಿಚಿತ್ರವಾಗಿಯೇ ಇದೇ, ನಮ್ಮ ರೈಲ್ವೆ ನಿಲ್ದಾಣಗಳಲ್ಲಿ ಇಷ್ಟೊಂದು ಅಲ್ಪಸುರಕ್ಷತೆಯೇ..!? ಇದರಿಂದಾಗಿ ಕೋವಿಡ್ ಹರಡುವ ಸಾಧ್ಯತೆ ಇಲ್ಲವೇ?
ಇದೇ ಮಾರು ವೇಷ ಹಾಕಿಕೊಂಡು ರೈಲಿಗೆ ದ್ರೋಹಿಗಳು ಅಪಾಯ ತಂದೊಡ್ಡುವ ಸಾಧ್ಯತೆಗಳು ಇಲ್ಲವೇ ? ನಮ್ಮಲ್ಲಿ ಭದ್ರತೆಗೆ, ರಕ್ಷಣೆಯ ಪ್ರಾಮುಖ್ಯತೆಗಳೇ ಇಲ್ಲವೇ. ಇಂತಹಹಲವಾರು ಪ್ರಶ್ನೆಗಳು ಮೂಡಿ ಬರುತ್ತೀವೆ
.