ಕುಂದಾಪುರ,ಜ.4: “ಸ್ವರ್ಗದ ದಾರಿಗೆ, ಪ್ರಾರ್ಥನೆಯ ಆಯುಧದೊಂದಿಗೆ” ಎಂಬ ಧ್ಯೇಯ ವಾಕ್ಯದೊಂದಿಗೆ ಕೊಟೇಶ್ವರ ಸಂತ ಅಂತೋನಿ ಚರ್ಚಿನಲ್ಲಿ ವಾರ್ಷಿಕ ಮಹಾ ಹಬ್ಬವು ಭಕ್ತಿ ಸಡಗರದ ಬಲಿದಾನದ ಅರ್ಪಿಸುವ ಮೂಲಕ ಜನವರಿ 4 ರಂದು ಆಚರಿಸಲಾಯಿತು
“ಪ್ರಾರ್ಥನೆ ಅಂದರೆ, ದೇವರ ಹತ್ತಿರ ಅನ್ಯೊನ್ಯವಾಗಿ ಗೆಳೆಯರಂತೆ ಮಾತನಾಡುವುದು. ಯೇಸು ಸ್ವಾಮಿಯೆ ಹೇಳಿದಂತೆ, ನೀವು ಉದ್ದುದ್ದಕ್ಕೂ, ಪ್ರಾರ್ಥನೆ ಅಂತಾ ಬಡಬಡಿಸುವಂತೆ ಬೊಬ್ಬಿಡಬೇಡಿ, ಚಿಕ್ಕದಾದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿರಿ, ನೀವು ಬೇಡುವುದಕ್ಕಿಂತ ಮೊದಲು, ನಿಮಗೇನು ಬೇಕೆಂದು ದೇವರಿಗೆ ತಿಳಿದಿದೆ” ಕಾರ್ಮೆಲ್ ಮೇಳದ ಖ್ಯಾತ ಧರ್ಮಗುರು ವಂ|ಡಾ|ವಿಲ್ಫ್ರೆಡ್ ರೊಡ್ರಿಗಸ್ ವಾರ್ಷಿಕ ಮಹಾಹಬ್ಬದ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
‘ಪ್ರಾರ್ಥನೆಗೆ ದೇವಾಲಯವೇ ಬೇಕೆಂಬುದಿಲ್ಲ. ಕೆಲವೊಂದು ಸಲ ದೇವಾಲ್ಯಗಳು ಇಲ್ಲದೆ ಜಾಗದಲ್ಲಿ ನಾವುರುತ್ತೇವೆ, ನೀವು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ, ನೀವು ಪ್ರಾರ್ಥಿಸಬಹುದು, ಅವಿಲಿನ ಸಣ್ಣ ಪುಷ್ಪ ಸಂತ ತೆರೆಜಾ, ಅಡಿಗೆ ಕೋಣೆಯಲ್ಲಿ, ಪಾತ್ರೆ ಪಗಡಿಯ ಜೊತೆ ಕೂಡ ದೇವರಿದ್ದಾನೆ ಎಂದು ಹೇಳುತ್ತಾಳೆ. ಯೇಸುವಿನ ಸಣ್ಣ ಪುಷ್ಪ ಸಂತ ತೆರೆಜಾ ಹೂ ತೋಟಗಳ ಮಧ್ಯೆ ಪ್ರಾಥನೆಯಿಂದ ಮಗ್ನನಾಗಿ, ಧ್ಯಾನಿಸುತಿದ್ದಳು, ಶಿಲುಭೆಯ ಸಂತ ಜೋನ್ ಕೂಡ ನಮಗೆ ಪ್ರಾರ್ಥನೆಗೆ ಮಾರ್ಗದರ್ಶಕರಾಗಿದ್ದಾರೆ, ಈ ಮೂವರು ಪ್ರಾರ್ಥನಾ ವಿಷದಲ್ಲಿ ಡಾಕ್ಟರೇಟ್ ಪಡೆದುಕೊಂಡ ಕಾರ್ಮೆಲ್ ಮೇಳದವರು” ಅನ್ನುತ್ತಾ ‘ಬಾಯಿ ಪಾಠಗಳ ಪ್ರಾರ್ಥನೆಕಿಂತ, ಸ್ವಂತವಿವೇಚೆನೆಯಿಂದ ಮಾಡಿದ ಪ್ರಾರ್ಥನೆಗಳು ಉತ್ತಮಾವಾಗಿರುತ್ತೆ, ಹೀಗೆ ನಾವು ಪ್ರಾರ್ಥನೆ ಎಂಬ ಆಯುಧವನ್ನು ಉಪಯೋಗಿಸಿಕೊಂಡು ಸ್ವರ್ಗರಾಜ್ಯವನ್ನು ಪಡೆದುಕೊಳ್ಳುವಂತಹ ಪ್ರಯತ್ನ ಪಡೋಣ’ ಎಂದು ಹೇಳಿದರು.
ಸಂಭ್ರಮದ ಬಲಿದಾನದಲ್ಲಿ ಕುಂದಾಪುರ ವಲಯ ಪ್ರಧಾನರಾದ ಅ|ವಂ| ಸ್ಟ್ಯಾನಿ ತಾವ್ರೊ ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಕೊಟೇಶ್ವರ ಚರ್ಚಿನ ಧರ್ಮಗುರು ವಂ|ಸಿರಿಲ್ ಎ. ಮಿನೇಜೆಸ್ ಬಲಿದಾನದಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಕಟ್ಕರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಆಲ್ವಿನ್ ಸಿಕ್ವೇರಾ, ಬಲಿದಾನಕ್ಕಾಗಿ ಅವರೆ ರಚಿಸಿದ ಭಕ್ತಿಗೀತೆಗಳಿಗೆ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು. ವಂ|ನಿಶಾಲ್ ಮೊನಿಸ್ ಸಂಗೀತ ನೀಡಿದರು. ಕಾರ್ಮೆಲ್ ರಾಣಿಪುರ ಮಠದ ಮುಖ್ಯಸ್ಥರಾದ ವಂ|ಆರ್ಚಿಬಾಲ್ಡ್ ಗೊನ್ಸಾಲ್ವಿಸ್, ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್, ಕಟ್ಕರೆ ಬಾಲಾ ಯೇಸುವಿ ಮಠದ ಕಾರ್ಮೆಲ್ ಮೇಳದ ಧರ್ಮಗುರುಗಳಾದ ವಂ| ದೀಪ್ ಫೆರ್ನಾಂಡಿಸ್, ವಂ|ಫ್ರಾನ್ಸಿಸ್ ಮೊಂತೇರೊ, ಕುಂದಾಪುರ ವಲಯದ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಕುಂದಾಪುರ ವಲಯದ ವಂ|ಫ್ರಾನ್ಸಿಸ್ ಕರ್ನೇಲಿಯೊ, ವಂ|ಎಡ್ವಿನ್ ಡಿಸೋಜಾ, ವಂ|ಆಲ್ಫೊನ್ಸ್ ಡಿಲೀಮಾ, ವಂ|ಚಾಲ್ರ್ಸ್ ಲುವಿಸ್ ಕುಂದಾಪುರ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ವಂ|ತೋಮಸ್ ಡಿಸೋಜಾ ಮತ್ತು ಧರ್ಮಭಗಿನಿಯರು ಹಾಗೂ ಚಚಿನ ಭಕ್ತಾಧಿಗಳು ಬಲಿದಾನದಲ್ಲಿ ಭಾಗಿಯಾಗಿದ್ದರು.