ಕೋಟೇಶ್ವರ: ಯುವ ಜನತೆ ಯೋಚಿಸಿ ಯಶಸ್ವಿನ ಕಡೆಗೆ ಸಾಗಬೇಕು.ಯುವ ಸಂಘಟನೆ ಮನಸ್ಸು ಮಾಡಿದರೇ ಯಾವುದೇ ಸಾಧನೆ ಮಾಡಲು ಸಾಧ್ಯವಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೆ.ಸತೀಶ್ ಗಾಣಿಗ ಹೇಳಿದರು
ಅವರು ಭಾನುವಾರ ಗಾಣಿಗ ಯುವ ಸಂಘಟನೆ ಮತ್ತು ಗಾಣಿಗ ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ವಲಯ ಅವೇಶ, ಕೋಟೇಶ್ವರ ಘಟಕ ವ್ಯಾಪ್ತಿಯ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ, ಸಾಧಕ ಹಾಗೂ ಹಿರಿಯ ದಂಪತಿಗಳ ಸನ್ಮಾನ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪತ್ರಕರ್ತ ರಾಜೇಶ ಗಾಣಿಗ ಅಚ್ಲಾಡಿ ಆಶಯದ ಮಾತುಗಳನ್ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ಬಿ.ಜಿ.ನಾಗರಾಜ ವಹಿಸಿದ್ದರು.
ಸಾಧಕ ಹಾಗೂ ಹಿರಿಯ ದಂಪತಿಗಳನ್ನು ರೋಟರಿ ಮಾಜಿ ಸಹಾಯಕ ಗೌವರ್ನರ್ ಪ್ರಭಾಕರ ಬಿ.ಕುಂಭಾಶಿ, ಉದ್ಯಮಿ ಗೋವಿಂದ ರಾವ್ ಸನ್ಮಾನಿಸಿ ಗೌರವಿಸಿದರು. ಕುಂದಾಪುರದ ವಕೀಲೆ ಕವಿತಾ, ಸೇಲಂ ಉದ್ಯಮಿ ಮಂಜುನಾಥ ಗಾಣಿಗ, ಸಾಲಿಗ್ರಾಮ ಕರ್ಣಾಟಕ ಬ್ಯಾಂಕ್ ಶಾಖೆಯ ಗ್ರಾಹಕ ಸೇವಾ ಸಹವರ್ತಿ ಗಾಯತ್ರಿ ಸಂತೋಷ್, ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಾಣಿಗ ಆನಗಳ್ಳಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಡಾ.ಶಿವರಾಮ ಕಾರಂತ ಶಿಕ್ಷಣ ಶಿಕ್ಷಕ ಪ್ರಶಸ್ತಿ ಪುರಸ್ಕøತ ಮುಖ್ಯ ಶಿಕ್ಷಕ ಮಂಜುನಾಥ ಕೆ.ಎಸ್., ಗಾಣಿಗ ಪ್ರಕಾಶನ ಕುಂದಾಪುರದ ಅಧ್ಯಕ್ಷ ರವಿರಾಜ್ ಕುಂಭಾಶಿ, ಸಂಪರ್ಕಸುಧಾ ಪತ್ರಿಕೆಯ ಸಂಪಾದಕ ಚಂದ್ರಶೇಖರ ಬೀಜಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಯಕ್ಷಗಾನ ಕಲಾವಿದ ಆಜ್ರಿ ಗೋಪಾಲ ಗಾಣಿಗ, ಕ್ರಿಕೆಟ್ ಆಟಗಾರ ರಾಜೇಶ್ ಗಾಣಿಗ, ಹಿರಿಯ ದಂಪತಿಗಳಾದ ಜಲಜ ವಿಠಲ್ ರಾವ್, ಪದ್ಮಾವತಿ ರಾಮ ಗಾಣಿಗ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಟೇಶ್ವರ ಘಟಕ ವ್ಯಾಪ್ತಿಯ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಪತ್ರಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಗೌರವಾಧÀ್ಯಕ್ಷ ಸುಧಾಕರ ಗಾಣಿಗ, ಮಾಜಿ ಗೌರವಾಧ್ಯಕ್ಷ ಶಂಕರನಾರಾಯಣ ಗಾಣಿಗ, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ಗಾಣಿಗ, ಕೋಶಾಕಾರಿ ನೇತ್ರಾವತಿ ಗಾಣಿಗ ಉಪಸ್ಥಿತರಿದ್ದರು.
ಗಾಣಿಗ ಯುವ ಸಂಘಟನೆ ಕೋಟೇಶ್ವರ ಘಟಕದ ಕೋಶಾಧಿಕಾರಿ ಎಸ್.ಎನ್.ಗೋಪಿರಾಜ್ ಬೀಜಾಡಿ ಸ್ವಾಗತಿಸಿದರು ಪ್ರಧಾನ ಕಾರ್ಯದರ್ಶಿ ಮಹೇಶ್ ಗಾಣಿಗ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಮಹಿಳಾ ಘಟಕದ ಗೌರವಾಧ್ಯಕ್ಷೆ ಕಲಾವತಿ ಗಾಣಿಗ ಪ್ರಾರ್ಥಿಸಿದರು. ಕಾರ್ಯದರ್ಶಿ ವೀಣಾ ರಾವ್ ವಂದಿಸಿದರು. ಪ್ರಕಾಶ ಗಾಣಿಗ ಸಹಕರಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.