ಕೊಟೇಶ್ವರ ಚರ್ಚ್ ದಶಮಾನತ್ಸೋವ:ನಾವೆಲ್ಲಾ ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು, ಕಷ್ಟಕ್ಕೆ ಒಳಾಗದವರಿಗೆ, ಹಸಿದವರಿಗೆ, ದೀನರಿಗೆ ನೆರೆಯಾಗೋಣ-ಬಿಶಪ್

JANANUDI.COM NETWORK


ಕುಂದಾಪುರ,ಜ.31: ಕೇವಲ ಹತ್ತು ವರ್ಷ ಆದರೂ ಅದರ ಆಚರಣೆ ಅಗತ್ಯವೇ ಎಂದು ನಮಗೆ ಆನ್ನಿಸಬಹುದು ಆದರೆ ಒಂದು ಮಗುವಿನ ಬೆಳವಣಿಗೆಯಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೊ ಅದೇ ರೀತಿ ಒಂದು ಧರ್ಮಸಭಾ ಕುಟುಂಬ ಬೆಳೆಯುವ ರೀತಿಯಲ್ಲಿಯೆ ಅಡಗುತ್ತದೆ. ಪಂಚಾಗ ಗಟ್ಟಿ ಇದ್ದರೆ ಕಟ್ಟಡ ಹೇಗೆ ಸುಭದ್ರವೊ ಹಾಗೇ ಮೊದಲ ವರ್ಷಗಳಲ್ಲಿ ಒಂದು ಚರ್ಚ್ ಒಳ್ಳೆಯ ರೀತಿಯಲ್ಲಿ ಚೆನ್ನಾಗಿ ನಡೆದರೆ ಮುಂದೆ ಅದಕ್ಕೆ ಉತ್ತಮ ಭವಿಷ್ಯ ಇರುತ್ತದೆ, ನಿಮ್ಮ ಚರ್ಚ್ ಗಾತ್ರ ಜನ ಸಂಖ್ಯೆಯಲ್ಲಿ ಚಿಕ್ಕದಾದರೂ, ಚರ್ಚ್ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಿರ್ವಹಣೆ ಆಗುತ್ತೀವೆ, ದೇವರು ನಿಮ್ಮ ಚರ್ಚ್ ಬೆಳೆಯವಲ್ಲಿ ಅನೇಕ ರೀತಿಯಲ್ಲಿ ಆಶಿರ್ವದಿಸಿದ್ದಾನೆ, ಆದರಿಂದ ನಾವು ‘ನಮ್ಮ ಧರ್ಮಸಭಾ ಕುಟುಂಬ ನಿಮಗೆ ಸ್ತುತಿಸುತ್ತದೆ ಕ್ರತಜ್ಞತೆಯ ಗಾಯನ’ ಎಂಬ ಧ್ಯೇಯ ವಾಕ್ಯದೊಂದಿಗೆ ದಶಮಾನತ್ಸೋವನ್ನು ಆಚರಿಸೋಣ’ ಎಂದು ಮಂಗಳೂರು ಧರ್ಮಪ್ರಾಂತ್ಯದ ಮೊನ್ಸಿಜೆಂರ್ ಅತೀ ವಂ| ಮ್ಯಾಕ್ಷಿಮ್ ನೊರೊನ್ಹಾ ಸಂದೇಶ ನೀಡಿದರು.
ಅವರು ಕೊಟೇಶ್ವರ ಚರ್ಚ್ ದಶಮಾನೋತ್ಸವ ಆಚರಣೆಯಲ್ಲಿ ಪ್ರಧಾನ ಯಾಜಕರಾಗಿ ಪವಿತ್ರ ಬಲಿದಾದನವನ್ನು ಅರ್ಪಿಸಿ ಸಂದೇಶ ನೀಡಿದರು. ಇವರು ಈ ಚರ್ಚ್ ಅಧಿಕ್ರತವಾಗಿ ಸ್ಥಾಪನೆಯಾಗುವ ಮೊದಲು ಶ್ರಮಿಸಿದವರಾಗಿದ್ದಾರೆ. ಚರ್ಚಿನ ಫಾ| ಸಿರಿಲ್ ಮಿನೇಜೆಸ್ ದಶಮಾನೊತ್ಸೋವ ಆಚರಿಸಲು ಸಹಕರಿಸಿದವರನ್ನು ಕ್ರತ್ಞತೆ ಸಲ್ಲಿಸಿದರು.
ದಶಮಾನತ್ಸೋವ ವೇದಿಕೆ ಕಾರ್ಯಕ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಿ ‘ಒಂದು ಚರ್ಚ್ ಸ್ಥಾಪಿಸಬೇಕಾದರೆ ಬಹಳ ಶ್ರಮಗಳಿವೆ, ಅದಕ್ಕೆ ಬೇಕಾದಷ್ಟು ತ್ಯಾಗ ಪರಿಶ್ರಮವಿದೆ ನಿಮ್ಮ ತ್ಯಾಗ ಪರಿಶ್ರಮಕ್ಕೆ ನನ್ನ ವಂದನೆಗಳು. ಚಿಕ್ಕ ಚರ್ಚ್ ಕುಟುಂಬವಾದರೂ, ಪ್ರತಿಭೆಯುಳ್ಳ ಚರ್ಚ್ ಕುಟುಂಬವಾಗಿದೆ. ಎಲ್ಲರೂ ಒಂದೇ ಮನಸ್ಸು ಒಂದೇ ಹ್ರದಯದೊಂದಿಗೆ ಈ ಚರ್ಚಗೆ ಭದ್ರ ಬುನಾದಿ ಹಾಕಿದ್ದಿರಿ, ಇದಕ್ಕೆ ನಾನು ನಿಮಗೆ ಅಭಿನಂದಿಸುತ್ತೆನೆ, ನಿಮ್ಮ ಬುನಾದಿ ದೇವರ ಮೇಲಿನ ವಿಶ್ವಾಸದ್ದು, ಬುನಾದಿ ಪ್ರೀತಿಯುಳ್ಳದು, ಬುನಾದಿ ಏಕತೆಯದು ಆದರಿಂದ ನಿಮ್ಮ ಧರ್ಮಗುರುಗಳಿಗೆ ಮತ್ತು ನಿಮ್ಮನ್ನು ಅಭಿನಂದಿಸುತ್ತೇನೆ’ ಅಂದು ಹೇಳುತ್ತಾ ನಮ್ಮ ಜಗತ್‍ಗುರು ಪೋಪ್ ನಮಗೆ ಸಂದೇಶ ನೀಡಿದ ಹಾಗೆ ಇಡೀ ವಿಶ್ವ ಒಂದು ಕುಟುಂಬವಾಗಿದೆ, ಆ ವಿಶಾಲ ಕುಟುಂಬದಲ್ಲಿ ನಾವೆಲ್ಲಾ ಅಣ್ಣ ತಮ್ಮಂದಿರು, ಅಕ್ಕ ತಂಗಿಯಂದಿರು, ಹಾಗಾಗಿ ಕಷ್ಟಕ್ಕೆ ಒಳಾಗದವರಿಗೆ, ಹಸಿದವರಿಗೆ, ದೀನದಲಿತರಿಗೆ ನಾವು ನೆರೆಯಾಗೋಣ’ ಎಂದು ಅವರು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಬಿಶಪರನ್ನು ಸನ್ಮಾನಿಸಲಾಯಿತು, ಬಿಶಪರು ಈಗ ಕೊಟೇಶ್ವರ ಚರ್ಚಿನಲ್ಲಿ ಸೇವೆ ನೀಡಿ ಉನ್ನತಿಗೆ ಕಾರಣಕರ್ತರಾದ ಫಾ| ಸಿರಿಲ್ ಮಿನೇಜೆಸ್, ಮೊನ್ಸಿಜೆಂರ್ ಮ್ಯಾಕ್ಷಿಮ್ ನೊರೊನ್ಹಾ, ಕಾರ್ಮೆಲ್ ಯಜಕ ಸಂಸ್ಥೆಯ ಕರ್ನಾಟಕ್-ಗೋವಾ ಪ್ರಾಂತ್ಯದ ಪ್ರತಿನಿಧಿಯಾದ ಫಾ|ದೀಪ್ ಫೆರ್ನಾಂಡಿಸ್, ಕುಂದಾಪುರ ವಲಯ ಪ್ರಧಾನ ಅ|ವಂ|ಸ್ಟ್ಯಾನಿ ತಾವ್ರೊ, ಫಾ| ವಾಲ್ಟರ್ ಮೆಂಡೊನ್ಸಾ, ಫಾ| ಆರ್ಚಿಬಾಲ್ಡ್, ಫಾ|ಜೋನ್ ಆಲ್ಫ್ರೆಡ್ ಬಾರ್ಬೊಜಾ, ಕೊಟೇಶ್ವರ ಸಂತ ಅಂತೋನಿ ವ್ರದ್ದಶ್ರಾಮದ ಮುಖ್ಯಸ್ಥೆ ಸಿಸ್ಟರ್ ಅವಿಟಾ ಇವರನ್ನು ಅವರು ಸನ್ಮಾನಿಸಿದರು. ಇದೇ ವೇಳೆ ಚರ್ಚ್ ದಶಮಾನೊತ್ಸೋವ ಸ್ಮರಣಿಕ ಪುರವಣಿಯನ್ನು ಉದ್ಘಾಟಿಸಿ ಅದರ ಸಂಪಾದಕ ಜೇಮ್ಸ್ ಬರೆಟ್ಟೊ ಇವರನ್ನು ಸನ್ಮಾನಿಸಿದರು, ಇಟೆಲಿಯ ಫ್ಲಾರೆನ್ಸ್‍ನಲ್ಲಿ ಸೇವೆ ನೀಡುತ್ತಿರುವ ಫಾ|ದೋನಾತ್ ರೇಬೆರೊ, ಸೌತ್ ಆಫ್ರಿಕಾದ ಜೋಹಾನ್ಸ್ ಬರ್ಗನಲ್ಲಿ ಸೇವೆ ನೀಡುತ್ತೀರುವ ಫಾ|ರಾಯನ್ ಪಾಯ್ಸ್, ಕುಂದಾಪುರ ಸಂತ ಮೇರಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್, ಫಾ| ಆಲ್ಫೊನ್ಸ್ ಡಿಲೀಮಾ ಹಾಗೂ ಇನ್ನೂ ಅನೇಕ ಕಾರ್ಮೆಲ್ ಸಂಸ್ಥೆಯ ಯಾಜಕರು ಬಲಿದಾದಲ್ಲಿ ಭಾಗಿಯಾಗಿದ್ದರು
ಫಾ|ಆಲ್ವಿನ್ ಸಿಕ್ವೇರಾ ಗಾಯನ ಪಂಗಡಕ್ಕೆ ನಿರ್ದೇಶನ ನೀಡಿದರು, ದಿಯೊಕೋನ್ ವಿಶಾಲ್ ಮೊನಿಸ್ ಸಂಗೀತ ನೀಡಿದರು. ಕಾರ್ಯದರ್ಶಿ ಲೀನಾ ಡಿಮೆಲ್ಲೊ ಚರ್ಚಿನ ಪಕ್ಷಿ ನೋಟವನ್ನು ಮುಂದಿಟ್ಟರು, 20 ಆಯೋಗಗಳ ಸಂಯೋಜಕಿ ಮರಿಯಾ ಮಸ್ಕರೇನ್ಹಾಸ್ ಸನ್ಮಾನಿತರ ಪರಿಚಯವನ್ನು ನೀಡಿದರು ಫಾ| ವಿಲ್ಪ್ರೆಡ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು. ಚರ್ಚ್ ಉಪಾಧ್ಯಕ್ಷ ರಿಚಾರ್ಡ್ ಡಿಸೋಜಾ ವಂದಿಸಿದರು