

ಕೋಟ: ಯುವ ಸಂಘಟನೆಗಳು ಸಮುದಾಯದ ಅಭಿವೃದ್ಥಿ ದುಡಿಯಬೇಕು. ಸಮಾಜಪರ, ಜನಪರ ಚಿಂತನೆಯ ಮೂಲಕ ಕೆಲಸ ಮಾಡುವ ಯುವ ಸಂಘಟನೆಗೆ ಎಲ್ಲರ ಪ್ರೋತ್ಸಾಹ ಅಗತ್ಯವಾಗಿದೆ. ಇಂದು ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ತಾವು ಉದ್ಯೋಗ ಪಡೆದಾಗ ಅದನ್ನು ಸಮಾಜಕ್ಕೆ ಹಿಂದಿರುಗಿಸಬೇಕು ಎಂದು ಮಾಬುಕಳ ಚೇತನಾ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಣೇಶ ಚೆಲ್ಲಿಮಕ್ಕಿ ಹೇಳಿದರು.
ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ, ಮಹಿಳಾ ಸಂಘಟನೆ ಕೋಟೇಶ್ವರ ಘಟಕದ ಆಶ್ರಯದಲ್ಲಿ ದಾನಿಗಳ ಸಹಕಾರದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಉಚಿತ ನೋಟ್ಸ್ ಪುಸ್ತಕ,ಕೊಡೆ ವಿತರಣೆ,ಪ್ರತಿಭಾ ಪುರಸ್ಕಾರ,ಗೌರವಾರ್ಪಣೆ,ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಆಶಯ ಭಾಷಣ ಮಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಅಭಿಲಾಷ ಬಿ.ಎ ವಹಿಸಿದ್ದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ
ಪ್ರಭಾಕರ ಬಿ.ಕುಂಭಾಶಿ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಿ,ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಭಾಕರ ಬಿ.ಕುಂಭಾಶಿ, ಕೆ.ಎಸ್.ಮಂಜುನಾ,ಗಣೇಶ್ ಚೆಲ್ಲಿಮಕ್ಕಿ,ವೆಂಕಟೇಶ ನಾವುಂದ,ನಾಗರಾಜ ಶೆಟ್ಟಿ,ಅಭಿಲಾಷ್ ಬಿ.ಎ ಅವರನ್ನು ಗೌರವಿಸಲಾಯಿತು. ನೂತನ ಅಧ್ಯಕ್ಷ ಉದಯ ಗಾಣಿಗ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕಲಾವತಿಅಚ್ಚುತ, ಅಧ್ಯಕ್ಷೆ ಪ್ರಭಾವತಿ ಗಾಣಿಗ ಶುಭ ಹಾರೈಸಿದರು. ವೇದಿಕೆಯಲ್ಲಿ ಘಟಕದ ಗೌರವಾಧ್ಯಕ್ಷ ಮಂಜುನಾಥ ಹೊದ್ರೋಳಿ,ಮಹಿಳಾ ಘಟಕದ ಕಾರ್ಯದರ್ಶೀ ವಿಜಯಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಬಿ.ಜಿ.ನಾಗರಾಜ ಸ್ವಾಗತಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.